ಡಾ.ಮಹಾಂತೇಶ ರಾಮಣ್ಣವರ 
ಜಿಲ್ಲೆ

ಜೈಪುರ ಸಮಾವೇಶಕ್ಕೆ ಡಾ.ರಾಮಣ್ಣವರ ಆಯ್ಕೆ

ಬೆಳಗಾವಿ: ರಾಜಸ್ತಾನದ ಜೈಪುರ ಚೈನ್​ ಸೋಷಿಯಲ್​ ಗ್ರೂಪ್​ ಕೇಂದ್ರೀಯ ಸಂಸ್ಥಾನ ಹಾಗೂ ನವದೆಹಲಿಯ ಮಹರ್ಷಿ ದದಿಚಿ ದೇಹದಾನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಆ.16, 17, 18ರಂದು ರಾಷ್ಟ್ರೀಯ ದೇಹದಾನ ಹಾಗೂ ಅಂಗಾಂಗ ದಾನ ಜಾಗೃತಿ ಸಮಾವೇಶ ಜರುಗಲಿದೆ. ದೇಹದಾನದ ರಾಯಭಾರಿಯಾಗಿ "ದೇಹದಾನ ಜಾಗೃತಿಗಾಗಿ ತಂದೆಯ ಮೃತದೇಹ ಛೇದನ ಮಾಡಿ ವೈದ್ಯಕಿಯ ಇತಿಹಾಸ ಸೃಷ್ಟಿಸಿದ ಕೆಎಲ್​ಇ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ರಚನಾ ಶರೀರದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.

ಬೈಲಹೊಂಗಲದಲ್ಲಿ ಡಾ.ರಾಮಣ್ಣವರ ಚಾರಿಟೆಬಲ್​ ಟ್ರಸ್ಟ್​ ಸ್ಥಾಪಿಸಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ದೇಹದಾನ, ಅಂಗಾಂಗ ದಾನ, ನೇತ್ರದಾನ, ಚರ್ಮದಾನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ 15 ವರ್ಷದಿಂದ ವೈದ್ಯಕಿಯ ಸೇವೆ ಮಾಡುತ್ತಿದ್ದು, ಸಾರ್ವಜನಿಕರಲ್ಲಿನ ಮೂಢನಂಬಿಕೆ ತೊಡೆದು ಸುಮಾರು 5,000ಕ್ಕಿಂತ ಹೆಚ್ಚು ಜನ ದೇಹ ದಾನ, ನೇತ್ರದಾನ ಹಾಗೂ ಚರ್ಮದಾನ ಮಾಡಲು ಪ್ರೇರೇಪಣೆಯಾಗಿದ್ದಾರೆ. ವಿವಿಧ ರಾಜ್ಯಗಳಿಂದ 52ಕ್ಕಿಂತ ಹೆಚ್ಚು ಸಂ&ಸಂಸ್ಥೆಗಳು ವೈದ್ಯರು ಪಾಲ್ಗೊಳ್ಳಲಿದ್ದಾರೆ. ರಾಮಣ್ಣವರ ಅವರನ್ನು ಕಾಲೇಜಿನ ಪ್ರಾಚಾರ್ಯ, ಶಿಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.