???????????????????????????????????? 
ಜಿಲ್ಲೆ

ಜೈನ ಸಾಹಿತ್ಯ ಜಾನಪದಕ್ಕೆ ಹತ್ತಿರವಾಗಿಲ್ಲ

ವಿಜಯವಾಣಿ ಸುದ್ದಿಜಾಲ ಧಾರವಾಡ
ಜೈನ ಧರ್ಮ ವಿಶ್ವ ಧರ್ಮ ಮತ್ತು ಪ್ರಾಚೀನ ಧರ್ಮ. ಜೈನ ಸಾಹಿತ್ಯ ಪ್ರಬುದ್ಧ ಸಾಹಿತ್ಯ. ಕನ್ನಡ ಜೈನ ಸಾಹಿತ್ಯವಂತೂ ಕನ್ನಡ ಭಾಷೆ ಶ್ರೀಮಂತಗೊಳಿಸಿದ ಸಾಹಿತ್ಯ. ಆದರೆ ಇದು ಜಾನಪದ ಸಾಹಿತ್ಯಕ್ಕೆ ಮಾತ್ರ ತೀರಾ ಹತ್ತಿರವಾಗಿಲ್ಲ ಎಂದು ಬನಹಟ್ಟಿಯ ಜಾನಪದ ಕಲಾವಿದ ಡಾ. ಬಿ.ಆರ್. ಪೊಲೀಸಪಾಟೀಲ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಿವಾನಂದ ಗಾಳಿ ದತ್ತಿ ಅಂಗವಾಗಿ ಬುಧವಾರ ಆಯೋಜಿಸಿದ್ದ ಜೈನ ಕನ್ನಡ ಜಾನಪದ ಹಾಡುಗಳು ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಶಿವಾನಂದ ಗಾಳಿ ಅತ್ಯಂತ ಸರಳ ಸಜ್ಜನಿಕೆಯ ಶ್ರೇಷ್ಠ ಸಾಹಿತಿ. ಅವರು ಧಾರವಾಡದ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಭವನ ನಿರ್ಮಿಸಿ ರಾಜ್ಯದಲ್ಲೇ ಸ್ವಂತ ಕಟ್ಟಡ ಹೊಂದಿದ ದಾಖಲೆ ನಿರ್ಮಿಸಿದ್ದಾರೆ ಎಂದರು.
ದತ್ತಿ ದಾನಿಗಳಾದ ಡಾ. ಜಿನದತ್ತ ಹಡಗಲಿ, ಸುಜಾತ ಹಡಗಲಿ ಆಶಯ ಭಾಷಣ ಮಾಡಿದರು. ಪ್ರೊ. ಕೆ.ಎಸ್. ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕೃಷ್ಣಮೂರ್ತಿ ಬಿಳಿಗೆರೆ, ಮಲ್ಲಿಕಾರ್ಜುನ ಚಿಕ್ಕಮಠ, ಆಶಾ ಸೈಯದ, ಶಶಿಧರ ಉಜ್ಜಯನಿ, ಶಾಂತಿನಾಥ ಮಲ್ಲಸಮುದ್ರ, ಡಾ. ವೀಣಾ ಬಿರಾದಾರ, ಡಾ. ಎಸ್.ಬಿ. ಗಾಡಿ, ಶ್ರೀಧರ ಬಸ್ತಿ, ಆರ್.ವಿ. ಪಾಟೀಲ, ವಿ.ಜಿ. ಪೂಜಾರ, ಲಲಿತಾ ಪಾಟೀಲ, ಸಂಗಯ್ಯ ಶಿವಪ್ಪಯ್ಯನಮಠ, ಶಿವಾನಂದ ಗಾಳಿ ಕುಟುಂಬಸ್ಥರು, ಸ್ನೇಹಿತರು, ಇತರರು ಇದ್ದರು.
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.