|ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮತ
ಜೈನ ಧರ್ಮದ ಆಚರಣೆಗಳು ಸಮಾಜಕ್ಕೆ ಮಾದರಿ
ಮಹಾವೀರ ಪಾಟೀಲ, ಸಂತೋಷ ಕೆಂಗಲಗೌಡ, ಸುಕುಮಾರ ಹುಡೇದ, ಬಾಬು ದೇಸಾಯಿ, ಧನುಕುಮಾರ ದೇಸಾಯಿ, ಸಂತೋಷ ಪಾಟೀಲ, ಶ್ರೀಪಾಲï ಕೆಂಗಲಗೌಡ, ಶಾಂತು ಬೆಲ್ಲದ, ಮಹಾವೀರ ಬೆಲ್ಲದ, ಭರತೇಶ ಬೆಲ್ಲದ, ಮಹಾವೀರ ಅಲಾರವಾಡ, ಅಣ್ಣಾಸಾಹೇಬ ದೇಸಾಯಿ ಇತರರಿದ್ದರು.
ಧಾರ್ಮಿಕ ಆಚರಣೆಗಳಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಮುನ್ನಡೆಯುವುದರಿಂದ ಮುಂದಿನ ಪೀಳಿಗೆ ಸಹ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದರು.
ತಾಲೂಕಿನ ಹಲಗಾ ಗ್ರಾಮದ ಜೈನ ಬಸದಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರ್ಯುಷಣ ಪರ್ವ ದಶಲಕ್ಷ ನೋಂಪಿ ಮತ್ತು ಪಂಚಮೇರು ನೋಂಪಿ ಮತ್ತು ಆಕಾಶ ಪಂಚಮಿ ನೋಂಪಿ ಮತ್ತು ಪುಷ್ಪಾಂಜಲಿ ನೋಂಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಅಂಹಿಸಾ ಪರಮೋ ಧರ್ಮಃ ಎನ್ನುವ ನಂಬಿಕೆಯನ್ನಿಟ್ಟುಕೊಂಡಿರುವ ಜೈನ ಧರ್ಮದ ಆಚರಣೆಗಳು ವಿಶಿಷ್ಟವಾಗಿದ್ದು, ಸಮಾಜಕ್ಕೆ ಮಾದರಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮತ ವ್ಯಕ್ತ ಪಡಿಸಿದ್ದಾರೆ.
ವಿಜಯವಾಣಿ ಸುದ್ದಿಜಾಲ ಬೆಳಗಾವಿ