filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 41; 
ಜಿಲ್ಲೆ

ಜೈ ಕಿಸಾನ್ ಮಾರುಕಟ್ಟೆ ಬಂದ್ ಮಾಡದಂತೆ ಒತ್ತಾಯ

ಜೈ ಕಿಸಾನ್ ಮಾರುಕಟ್ಟೆ ಬಂದ್ ಮಾಡದಂತೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ನಗರದ ಹೊರವಲಯದಲ್ಲಿರುವ ಜೈ ಕಿಸಾನ್ ತರಕಾರಿ ಮಾರುಕಟ್ಟೆ ರೈತರಿಗೆ ಅನುಕೂಲಕರವಾಗಿದ್ದು, ಇದನ್ನು ಬಂದ್‌ ಮಾಡದಂತೆ ಒತ್ತಾಯಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜೈ ಕಿಸಾನ್ ತರಕಾರಿ ಮಾರುಕಟ್ಟೆಯು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇರುವುದರಿಂದ ತರಕಾರಿ ಸಾಗಿಸಲು ಅನುಕೂಲವಾಗಿದೆ. ಜತೆಗೆ ಸರ್ಕಾರಿ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ರೈತರಿಂದ ಶೇ.8-15 ಕಮಿಷನ್ ಪಡೆಯುತ್ತಿದ್ದಾರೆ. ಇದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಸ್ಪರ್ಧಾತ್ಮಕ ಬೆಲೆ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಖಾಸಗಿ ಮಾರುಕಟ್ಟೆ ಸ್ಥಾಪಿಸಲು ಅವಕಾಶ ನೀಡಿದೆ. ಅಧಿಕಾರಿಗಳು ರಾಜಕೀಯ ಒತ್ತಡದಿಂದ ಮಾರುಕಟ್ಟೆ ಬಂದ್ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಜಗದೀಶ ಪಾಟೀಲ, ರಾಜಪ್ಪ ಪಾಟೀಲ, ಶಿವಪುತ್ರಯ್ಯ ಹಿರೇಮಠ, ಶಿವರಾಯಗೌಡ ಪಾಟೀಲ ಇತರರಿದ್ದರು.