ಕಲಬುರಗಿ : ಅಕ್ರಮ ಮರಳು ಸಾಗಣೆ ತಡೆಯುವುದು ದಂಧೆಕೋರರನ್ನು ನಿಗ್ರಹಿಸುವುದು ಸೇರಿದಂತೆ ಕರ್ತವ್ಯ ನಿರ್ಲಕ್ಷÈ ಆರೋಪದ ಹಿನ್ನೆಲೆಯಲ್ಲಿ ಜೇವರ್ಗಿ ಸಿಪಿಐ ಭೀಮನಗೌಡ ಬಿರಾದಾರ, ನೆಲೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಗೌತಮ ಮತ್ತು ಎಸ್‌ಬಿ ಕಾನ್‌ಸ್ಟೇಬಲ್ ರಾಜಶೇಖರ ಎಂಬುವರನ್ನು ಅಮಾನತ್ತುಗೊಳಿಸಿ ಎಸ್ಪಿ ಇಶಾ ಪಂತ್ ಅವರು ಆದೇಶ ಹೊರಡಿಸಿ, ಐಜಿಪಿಯವರಿಗೆ ವರದಿ ಸಲ್ಲಿಸಿದ್ದಾರೆ.
ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿಯಲ್ಲಿ ಭೀಮಾ ನದಿಯಿಂದ ಅಕ್ರಮ ಮರಳು ಸಾಗಣೆ ಮಾಡುವ ದಂಧೆಕೋರರಿAದ ನೆಲೋಗಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಯೂರ ಅಲಿಯಾಸ್ ಮೈಸೂರು ಚವ್ಹಾಣ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಕರ್ತವ್ಯ ನಿರ್ಲಕ್ಷÈ ಮಾಡಿದ್ದಕ್ಕಾಗಿ ಸಿಪಿಐ, ಪಿಎಸ್‌ಐ ತಲೆದಂಡವಾದAತಾಗಿದೆ. ಈ ಕುರಿತು ಆಳವಾದ ತನಿಖೆ ನಡೆಸಲಾಗುವುದು. ಇನ್ನೂ ಯಾರಾದರು ತಪ್ಪು ಇಲ್ಲವೇ ಕರ್ತವ್ಯ ನಿರ್ಲಕ್ಷÈ ಮಾಡಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಇಶಾ ಪಂತ್ ತಿಳಿಸಿದ್ದಾರೆ.
==೦೦೦==