ಕಳಸ ಜೆಸಿಐ ಅಧ್ಯಕ್ಷ ಸುಧಾಕರ್‌ಗೆ ವಲಯಾಧ್ಯಕ್ಷ ವಿಜಯಕುಮಾರ್ ಪ್ರಮಾಣವಚನ ಬೋಧಿಸಿದರು. ಮುರಳೀಧರ್, ಮಾರುತೇಶ್, ವಸಂತ, ಸತೀಶ್ ಇತರರಿದ್ದರು. 
ಜಿಲ್ಲೆ

ಜೆಸಿಐನಿಂದ ನಾಯಕತ್ವ ಬೆಳವಣಿಗೆ

ಕಳಸ: ಕಾರ್ಯಕ್ರಮಗಳನ್ನು ರೂಪಿಸುವ ನಾಯಕತ್ವ ಜೆಸಿಐ ಸದಸ್ಯನಲ್ಲಿ ಕಾಣಬಹುದು ಎಂದು ಸಮಾಜ ಸೇವಕ ಬ್ರಹ್ಮದೇವ ಹೇಳಿದರು.

ಕಳಸ ಜೆಸಿಐ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘ ಸಂಸ್ಥೆಗಳನ್ನು ಹುಟ್ಟುಹಾಕುವುದು ಸುಲಭ. ಆದರೆ ಮುನ್ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಜೆಸಿಐನಲ್ಲಿ ಸಿಗುವ ತರಬೇತಿಯಿಂದ ನಾಯಕತ್ವ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.

ಜೆಸಿಐ ವಲಯ 14ರ ಅಧ್ಯಕ್ಷ ವಿಜಯಕುಮಾರ್ ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಿಸಿದರು. ನಿರ್ಗಮಿತ ಅಧ್ಯಕ್ಷ ಶ್ರೀಕಾಂತ್ ಅವರಿಂದ ನೂತನ ಅಧ್ಯಕ್ಷ ಸುಧಾಕರ್ ಅಧಿಕಾರ ಸ್ವೀಕರಿಸಿದರು. ಸದಸ್ಯರಾಗಿ ಸೇರ್ಪಡೆಗೊಂಡ ರಘು ಹಾಗೂ ಪುರಂದರ ಅವರಿಗೆ ವಲಯ ಉಪಾಧ್ಯಕ್ಷ ಕಿರಣ್ ಯಾದವ್ ಪ್ರಮಾಣವಚನ ಬೋಧಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಮುರಳೀಧರ್, ಮಾರುತೇಶ್, ಮಧು ಗೌಡ, ಶಿವಪ್ರಸಾದ್, ಸುನೀಲ್ ಆಚಾರ್ಯ, ಸಂತೋಷ್ ಮೆಣಸೂರು, ಜಯಪ್ರಕಾಶ್, ನಜೀರ್, ವಸಂತ, ಸತೀಶ್ ಅವರಿಗೆ ನೂತನ ಅಧ್ಯಕ್ಷ ಸುಧಾಕರ್ ಪ್ರಮಾಣವಚನ ಬೋಧಿಸಿದರು. ಕ್ರೀಡಾ ಪಟು ವಿಧುಷಾ ಜೈನ್, ನಿವೃತ ಶಿಕ್ಷಕ ಸುರೇಂದ್ರ, ಸಮಾಜಸೇವಕ ಬ್ರಹ್ಮದೇವ ಅವರನ್ನು ಗೌರವಿಸಲಾಯಿತು.