ಜಿಲ್ಲೆ

ಜೆಬಿಸಿ ಕಾಲುವೆಗೆ ನ.16ರವರೆಗೆ ನೀರು

ಕಲಬುರಗಿ: ಜೇವರ್ಗಿ ಶಾಖಾ ಕಾಲುವೆಗೆ ವಾರಾಬಂದಿ ಇಲ್ಲದೆ ನ.೧೬ರವರೆಗೆ ನೀರು ಹರಿಯಲಿದೆ. ಅದುವರೆಗೆ ಚಿಂತೆ ಇಲ್ಲದೆ ರೈತರು ನೀರನ್ನು ಬಳಸಬಹುದು ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದ್ದಾರೆ. ನ.೧೩ರವರೆಗೆ ಜೆಬಿಸಿ ನೀರು ಹರಿಸಿ ನಂತರ ವಾರಾಬಂದಿ ಮಾಡುವ ಚರ್ಚೆ ನಡೆಯುವುದಿತ್ತು. ರೈತರಿಗೆ ಇದರಿಂದ ತೊಂದರೆಯಾಗಲಿದೆ, ಬೆಳೆಗಳು ಕಟಾವು ಹಂತದಲ್ಲಿ ಇರುವುದರಿಂದ ಕಾಲುವೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸುವುದು ಅಗತ್ಯ ಎಂಬ ಸಂಗತಿಯನ್ನು ಕೆಬಿಜೆಎನ್‌ಎಲ್ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಆರ್.ಬಿ.ತಿಮ್ಮಾಪುರ ಗಮನಕ್ಕೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.೧೪ ರಿಂದ ನ.೧೬ರವರೆಗೆ ಕಾಲುವೆಯಲ್ಲಿ ಪೂರ್ಣ ಪ್ರಮಾಣದಲ್ಲಿಯೇ ನೀರು ಹರಿಯಲಿದೆ. ಈ ದಿನಗಳಲ್ಲಿ ವಾರಾಬಂದಿ ಮಾಡುವ ವಿಚಾರ ಸದ್ಯ ನಿರ್ಣಯಿಸುವುದಿಲ್ಲ. ಅದೇನಿದ್ದರೂ ನ.೧೬ ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಸ್ತÈತವಾಗಿ ಚರ್ಚಿಸಿಯೇ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಸಚಿವ ಆರ್.ಬಿ.ತಿಮ್ಮಾಪುರ ಭರವಸೆ ನೀಡಿz್ದÁರೆಂದು ಡಾ. ಅಜಯ್ ಸಿಂಗ್ ಹೇಳಿz್ದÁರೆ. ಜೇವರ್ಗಿ ರೈತರ ಜತೆಗೆ ಪಕ್ಕದ ಶಹಾಪುರ ರೈತರಿಗೂ ಜೆಬಿಸಿ ಕಾಲುವೆಯೇ ಜೀವನಾಧಾರ. ಎರಡೂ ಮತಕ್ಷೇತ್ರಗಳ ರೈತರು ನೀರನ್ನು ಸದುಪಯೋಗ ಪಡೆಸಿಕೊಂಡು ಚೆನ್ನಾಗಿ ಇಳುವರಿ ಮಾಡುವಂತೆ ರೈತರಿಗೆ ಡಾ.ಅಜಯಸಿಂಗ್ ಸಲಹೆ ನೀಡಿದ್ದಾರೆ.