ಜಿಲ್ಲೆ

ಜೆಡಿಎಸ್​ನಿಂದಷ್ಟೇ ರಾಜ್ಯದ ಅಭಿವೃದ್ಧಿ : ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಪಾದನೆ, ಚನ್ನಮಾನಹಳ್ಳಿ ಜನತಾ ಜಲಧಾರೆ ರಥಕ್ಕೆ ಅದ್ದೂರಿ ಸ್ವಾಗತ

ಕೈಲಾಂಚ: ಹೋಬಳಿಗೆ ಶುಕ್ರವಾರ ಆಗಮಿಸಿದ ಜೆಡಿಎಸ್​ ಜನತಾ ಜಲಧಾರೆ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ಸಂಜೆ ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಚನ್ನಮಾನಹಳ್ಳಿಗೆ ಆಗಮಿಸಿದ ರಥಕ್ಕೆ ಜೆಡಿಎಸ್​ ಮುಖಂಡರು, ಕಾರ್ಯಕರ್ತರು ಆರತಿ ಎತ್ತಿ ಪೂರ್ಣಕುಂಭ ಸ್ವಾಗತ ಕೋರಿದರು. ಜನಪದ ಕಲಾ ತಂಡಗಳು ಯಾತ್ರೆ ಮೆರುಗು ನೀಡಿದವು. ಶಾಸಕಿ ಅನಿತಾಕುಮಾರಸ್ವಾಮಿ ಪಾಲ್ಗೊಂಡಿದ್ದರು.

ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ಜೆಡಿಎಸ್​ ಪಕ್ಷದಿಂದಷ್ಟೇ ರಾಜ್ಯದ ಅಭಿವೃದ್ಧಿ, ನೀರಾವರಿ ಯೋಜನೆಗಳ ಅನುಷ್ಠಾನ ಸಾಧ್ಯ. ಈ ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಹಲವಾರು ನೀರಾವರಿ ಯೋಜನೆಗಳು ಸಾಕಾರಗೊಂಡಿವೆ ಎಂದರು.

ರಾಜ್ಯದ ಸಮಗ್ರ ನೀರಾವರಿ ಯೋಜನೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜೆಡಿಎಸ್​ ಪಕ್ಷ ಜನತಾ ಜಲಧಾರೆ ರಥಯಾತ್ರೆ ಕೈಗೊಂಡಿದೆ. ರಾಷ್ಟ್ರೀಯ ಪಕ್ಷಗಳ ನಿರಾಸಕ್ತಿಯಿಂದಾಗಿ ನೀರಾವರಿ ಯೋಜನೆಗಳು ಜಾರಿಯಾಗದೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.

ರೈತಪರ ಒಲವು ಹೊಂದಿರುವ ಪಕ್ಷ ಜೆಡಿಎಸ್​ ಆಗಿದೆ. ನನ್ನ ಕ್ಷೇತ್ರದಲ್ಲಿ ಈಗಾಗಲೇ ಮೂರುವರೆ ಕೋಟಿ ವೆಚ್ಚದಲ್ಲಿ ಮೊಟ್ಟೆದೊಡ್ಡಿ ಏತ ನೀರಾವರಿ ಯೋಜನೆ, 10 ಕೋಟಿ ವೆಚ್ಚದಲ್ಲಿ ವಡ್ಡರಹಳ್ಳಿ ಗ್ರಾಮದಲ್ಲಿ ಅರ್ಕಾವತಿ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಶಿಂಷಾ ಕಾವೇರಿ ನದಿಯಿಂದ ಕೈಲಾಂಚ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅನಿತಾ ತಿಳಿಸಿದರು.

ಜೆಡಿಎಸ್​ ತಾಲೂಕು ಅಧ್ಯಕ್ಷ ರಾಜಶೇಖರ್​, ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್​, ಜಿಪಂ ಮಾಜಿ ಅಧ್ಯಕ್ಷ ಎಚ್​.ಸಿ. ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿ ಬ್ಯಾಂಕ್​ ಮಾಜಿ ನಿರ್ದೇಶಕ ಪಿ. ಅಶ್ವಥ್​, ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ, ಸದಸ್ಯರಾದ ಭಾಸ್ಕರ್​, ಜಯಲಕ್ಷ್ಮಿ, ಮುಖಂಡರಾದ ದೇವರದೊಡ್ಡಿ ಚಂದ್ರಗಿರಿ, ಕುಮಾರ್​, ವೆಂಕಟೇಶ್​, ಗಿರಿಸ್ವಾಮಿ, ಜಿ.ಪಿ. ಗಿರೀಶ್​ ವಾಸು, ಗುನ್ನೂರು ದೇವರಾಜು, ಕೃಷ್ಣ, ಲಕ್ಷ್ಮಿಕಾಂತ್​, ನವೀನ್​, ನಂದೀಶ್​ಗೌಡ, ತಮ್ಮಣ್ಣ, ಗೋಪಾಲನಾಯ್ಕ, ಚಲುವರಾಜು, ನಾಗರಾಜು, ಚಂದ್ರಗಿರಿ, ನರೇಂದ್ರ, ಬೈರಪ್ಪ, ಎಸ್​. ಮಹೇಶ್​, ಮಹದೇಶಸ್ವಾಮಿ, ಚಂದ್ರಣ್ಣ, ರೇವಣ್ಣ, ಜೈಕುಮಾರ್​, ಜ್ಯೋತಿಬಾಲಕೃಷ್ಣ ಪ್ರಚಾರ ಸಮಿತಿ ಅಧ್ಯಕ್ಷ ಪಾಂಡುರಂಗ ಮುಂತಾದವರಿದ್ದರು.

ಹೋಗಳಿಯಲ್ಲಿ ಯಾತ್ರೆ ಮುಕ್ತಾಯ: ಕೈಲಾಂಚ ಹೋಬಳಿಯ ಚನ್ನಮಾನಹಳ್ಳಿ ಗ್ರಾಮದಲ್ಲಿ ಸಂಜೆ ಆರಂಭಗೊಂಡ ರಥಯಾತ್ರೆ ವಿಭೂತಿಕೆರೆ ಮಾರ್ಗವಾಗಿ ಬನ್ನಿಕುಪ್ಪೆ, ಕವಣಾಪುರ ಮಾರ್ಗವಾಗಿ ಎಸ್​ಆರ್​ಎಸ್​ ಬೆಟ್ಟ, ಅವ್ವೇರಹಳ್ಳಿ ಮಾರ್ಗವಾಗಿ ಕೈಲಾಂಚ ಮೂಡ್ಲಳ್ಳಿದೊಡ್ಡಿ ಮಾರ್ಗವಾಗಿ ಹುಣಸನಹಳ್ಳಿ ಗ್ರಾಮದಲ್ಲಿ ಸಂಚರಿಸಿ ಕೈಲಾಂಚ ಹೋಬಳಿಯಲ್ಲಿ ಯಾತ್ರೆ ಮುಗಿಸಿತು.