ಹಾರೋಹಳ್ಳಿ: ಜನತೆ ಎಚ್.ಡಿ. ದೇವೇಗೌಡ ಸೇರಿ ಪದ ಎಲ್ಲರಿಗೂ ಶಕ್ತಿ ತುಂಬಿದ್ದೀರಿ. ಯಾರು ಏನೇ ಹೇಳಿದರೂ ಮುಂದೆ ಸ್ವತಂತ್ರವಾಗಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕನಕಪುರ ತಾಲೂಕಿನ ಮರಳವಾಡಿಯ ಸರ್ಕಾರಿ ಶಾಲಾ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಾಗುವಳಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಜನತೆಗೆ ಆರ್ಥಿಕ ಶಕ್ತಿ ತುಂಬಲು ಸ್ವತಂತ್ರವಾಗಿ ಸರ್ಕಾರ ರಚಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪಕ್ಷ ಸಂಟಿಸಲಾಗುತ್ತಿದೆ ಎಂದರು.
ಜಿಲ್ಲೆಯ ಜನರು ಯಾವುದೇ ನೋವು ಅನುಭವಿಸುವುದನ್ನು ಸಹಿಸುವುದಿಲ್ಲ, ಯಾವುದೇ ಅಪೇೆಗಳನ್ನಿಟ್ಟುಕೊಂಡು ಈ ಜಿಲ್ಲೆಗೆ ನಾವು ಬಂದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಈ ಹಿಂದೆ ಸಾಗುವಳಿ ಚೀಟಿ ವಿತರಣೆಗೆ ಸಮಸ್ಯೆ ಇತ್ತು. ಶಾಸಕಿ ಶಾಸಕಿ ಅನಿತಾ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಭಿವೃಧ್ಧಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ರೈತರು 30&40 ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಮೊದಲು ಸಾಗುವಳಿ ಚೀಟಿಗಳಿಗೆ ಮಾನ್ಯತೆ ನೀಡುತ್ತಿರಲಿಲ್ಲ. ಇದೀಗ ಭೂಮಿಗೆ ಬಂಗಾರದ ಬೆಲೆ ಇರುವುದರಿಂದ ಸಾಗುವಳಿ ಚೀಟಿಗೂ ಮಾನ್ಯತೆ ನೀಡಲಾಗುತ್ತಿದೆ ಎಂದರು. ಹಾರೋಹಳ್ಳಿ ಮತ್ತು ಮರಳವಾಡಿ ಭಾಗಗಳು ಬೆಂಗಳೂರಿಗೆ ಹೊಂದಿಕೊಂಡಿರುವುದರಿಂದ ಬಿಬಿಎಂಪಿ, ಅರಣ್ಯ ಇಲಾಖೆಗಳ ಕೆಲ ನಿಯಮಗಳಿಂದ ಸ್ವಲ್ಪ ತೊಂದರೆಯಾಗಿದೆ. 100&110 ಜನರಿಗೆ ಸಾಗುವಳಿ ಚೀಟಿ ಬಾಕಿ ಇದ್ದು, ಅವುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಕಾನೂನುಬದ್ಧ ಎಲ್ಲ ಬೇಡಿಕೆಗಳನ್ನು ಈಡೇರಿಸಲು ತಯಾರಿದ್ದು, ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬಾರದು. ಕುಮಾರಸ್ವಾಮಿ ಅವರಿಗೆ ೇತ್ರದ ಬಗ್ಗೆ ಕಾಳಜಿ ಇದ್ದು, ಅಭಿವೃಧ್ಧಿ ಕೆಲಸಗಳ ವಿಚಾರವಾಗಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಸಾಗುವಳಿ ಚೀಟಿಗಳನ್ನು ವಿತರಿಸಲಾಗುವುದು ಅದರಲ್ಲಿ ಅನುಮಾನ ಬೇಡ ಎಂದು
ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಇದೀಗ 54 ಸಾಗುವಳಿ ಚೀಟಿ ವಿತರಿಸಲಾಗುತ್ತಿದ್ದು, 51 ಚೀಟಿಗಳನ್ನು ಕಮಿಟಿ ಮುಂದೆ ಇಟ್ಟು ನೀಡಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಯಲ್ಲೂ ಕಂದಾಯ ಅದಾಲತ್ ನಡೆಸಲಾಗುವುದು. ಕಚೇರಿಗೆ ಅಲೆಯುವ ಅಗತ್ಯವಿಲ್ಲ ಎಂದರು.
ತಹಸೀಲ್ದಾರ್ ವಿಶ್ವನಾಥ್, ರಾಜಸ್ವ ನಿರೀಕ ಶಿವರುದ್ರಯ್ಯ, ಜಿಲ್ಲಾ ಜೆಡಿಎಸ್ ಉಪಾಧ್ಯ ರಾಮಕೃಷ್ಣ, ಭೈರೇಗೌಡ, ಭುಜಂಗಯ್ಯ, ಪಡುವಣಗೆರೆ ಸಿದ್ದರಾಜು, ತೋಕಸಂದ್ರ ಗ್ರಾಪಂ ಅಧ್ಯ ಸುನೇತ್ರ ಶಿವರುದ್ರಯ್ಯ, ಪ್ರದಿಪ್, ಗುತ್ತಲಹುಣಸೆ ಶ್ರೀಕಂಠು ಮತ್ತಿತರ ಮುಖಂಡರು ಹಾಜರಿದ್ದರು.