ಚಿತ್ರದುರ್ಗ: ಮುಂಬರುವ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದು,ಕಾಂಗ್ರೆಸ್,ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸುತ್ತೇವೆ ಎಂಬ ಸಂಕಲ್ಪ ತೊಡುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ಪಕ್ಷದ ಕಾರ‌್ಯಕರ್ತರಿಗೆ ಸೂಚಿಸಿದರು.
ನಗರದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಬುಧವಾರ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಂಕಲ್ಪ ಯಾತ್ರೆ ಉ ದ್ಘಾಟಿಸಿ ಮಾತನಾಡಿ,ಕಾಂಗ್ರೆಸ್ ಮತ್ತೆ ಅಧಿಕಾರದ ಕನಸು ಕಾಣುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 140 ಸೀಟು ಗೆಲ್ಲುತ್ತೇವೆ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ.
ದೇಶದಲ್ಲಿ ಈಚೆಗೆ ಆದ ನಾನಾ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ,ಉಪಚುನಾವ ಣೆಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಎಐಸಿಸಿ ನಾಯಕ ರಾಹುಲ್‌ಗಾಂಧಿ ಅವರ ಭಾರತ್‌ಜೋಡೋ ಯಾತ್ರೆ ಕರ್ನಾಟಕದಲ್ಲಿದ್ದಾಗಲೇ ನಗರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜಯ ಸಾಧಿಸಿದೆ. ಗುಜರಾತ್‌ನಲ್ಲಿ ಗೆಲುವಿನ ದಾಖಲೆ ಬರೆಯಲಿದ್ದೇವೆ. ಪರಿಸ್ಥಿತಿ ಹೀಗಿರುವಾಗ ನೀವು ಹೇಗೆ ಗೆಲ್ಲುವ ಮಾತನಾಡುತ್ತೀರಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲು ಹಾಕಿದರು.
ಕೇಂದ್ರ,ರಾಜ್ಯಸರ್ಕಾರಗಳ ಜನಪರ ಯೋಜನೆಗಳು,ಭಯೋತ್ಪಾದನೆ ನಿಗ್ರಹ,ಪಿಎಫ್‌ಐ ನಿಷೇಧದಂಥ ನಿರ್ಧಾರಗಳು ಬಿಜೆಪಿ ಗೆಲು ವಿನ ಹಾದಿ ಸುಗಮಗೊಳಿಸಿವೆ. ಚಿತ್ರದುರ್ಗ ಜಿಲ್ಲೆ 6 ಕ್ಷೇತ್ರಗಳ ಸಹಿತ ರಾಜ್ಯದಲ್ಲಿ 150 ಸೀಟುಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಮೊದಲಿ ನಿಂದಲೂ ಪದೆ,ಪದೇ ಹಿಂದು ಧರ್ಮ,ಹಿಂದುಗಳನ್ನು ಅವಮಾನಿಸಿಕೊಂಡು ಬರುತ್ತಿದೆ ಎಂದು ಕೆಪಿಸಿಸಿ ಕಾರ‌್ಯಾಧ್ಯಕ್ಷ ಸತೀಶ್ ಜಾರಕಿ ಹೊಳಿ ಹೇಳಿಕೆ ಖಂಡಿಸಿದರು.
ನಮ್ಮ ಸಂಸ್ಕೃತಿ,ಪೂಜೆ,ಆಚಾರ ವಿಚಾರಗಳನ್ನು ತಿಳಿಯಲು ವೇದ,ಪುರಾಣಗಳ ಅಧ್ಯಯನ ಮಾಡಬೇಕೆ ಹೊರತು ಗೂಗಲ್,ವಿಕಿಪೀ ಡಿಯಾಗಳನ್ನು ಅಲ್ಲ. ರಾಮಮಂದಿರಕ್ಕೂ ಕಾಂಗ್ರೆಸ್ ಅಡ್ಡಗಾಲು ಹಾಕಿತ್ತು. ಪ್ರಧಾನಿ ಮೋದಿ ನಮ್ಮ ಸಂಸ್ಕೃತಿ ಪುನರುತ್ಥಾನಕ್ಕೆ ಅವಿರತ ಶ್ರಮಿಸುತ್ತಿದ್ದಾರೆ. ಚಿತ್ರದುರ್ಗದ ಅಭಿವೃದ್ಧಿ ನೋಡಿದರೆ ತಿಪ್ಪಾರೆಡ್ಡಿ ಈ ಬಾರಿ ಅತೀ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ,ನಮ್ಮ ಪಕ್ಷದ ನಾನಾ ಸಮಾವೇಶಗಳು ಇತಿಹಾಸ ಸೃಷ್ಟಿಸುತ್ತಿವೆ. ನರೇಂದ್ರ ಮೋದಿ,ಬಿಎಸ್‌ವೈ -ಬೊಮ್ಮಾಯಿ ಸರ್ಕಾರಗಳ ಹತ್ತಾರು ಕಲ್ಯಾಣ ಕಾರ‌್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ನನ್ನ ಕ್ಷೇತ್ರ ವ್ಯಾಪ್ತಿಯ ನಗರ,ಗ್ರಾಮೀಣ ಪ್ರದೇಶ ದಲ್ಲೂ ಸಿಸಿ ರೋಡ್‌ಗಳಾಗಿವೆ.
12 ಸಾವಿರ ಬಡ ಕುಟುಂಬಗಳಿಗೆ ಮನೆ ಹಕ್ಕು ಪತ್ರ ಕೊಟ್ಟಿದ್ದೇವೆ. ಕುಡಿವ ನೀರು,ಕೊಳವೆ ಮೂಲಕ ಅಡುಗೆ ಅನಿಲ ಸಂಪರ್ಕ, 40 ಸಾವಿರಕ್ಕೂ ಹೆಚ್ಚು ವಸತಿ ಸೇರಿದಂತೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಿರುವ ಜನಪರ ಕೆಲಸಗಳನ್ನು ವಿವರಿಸಿದರು. ಚಿತ್ರದುರ್ಗದಲ್ಲಿ 24/7 ಕುಡಿವ ನೀರು ಸಂಪರ್ಕ ಯೋಜನೆ ಅನುಷ್ಠಾನಕ್ಕಾಗಿ 595 ಕೋಟಿ ರೂ.ಅನುದಾನ ಮಂಜೂರಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮುಂದಿನ ತಿಂಗಳು ಶಂಕುಸ್ಥಾಪನೆಯಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ,ದುರ್ಗದ ಅಭಿವೃದ್ಧಿ ಗಮನಿಸಿದರೆ ಈ ಬಾರಿ ಚುನಾವಣೆಯಲ್ಲಿ ತಿಪ್ಪಾರೆಡ್ಡಿ 50 ಸಾವಿರಕ್ಕೂ ಅಧಿಕ ಮತಗಳಿಂದ ಅಂತರದಿಂದ ಗೆಲುವು ಸಾಧಿಸುತ್ತಾರೆ. ನ.20ರಂದು ಬಳ್ಳಾರಿಯಲ್ಲಿ ನಡೆಯಲಿರುವ ಎಸ್.ಟಿ. ಸಮಾವೇಶಕ್ಕೆ ದುರ್ಗದಿಂದ ಲಕ್ಷಾಂತರ ಜನರು ಭಾಗವಹಿಸ ಬೇಕೆಂದರು.
ರಾಜ್ಯಪ್ರಧಾನ ಕಾರ‌್ಯದರ್ಶಿ ಅಶ್ವತ್ಥ ನಾರಾಯಣ ಮಾತನಾಡಿ,ಶ್ರೀ ವಾಲ್ಮೀಕಿ ರಚನೆ ರಾಮಾಯಣದ ಕುರಿತಂತೆ ಸತೀಶ್ ಜಾರಕಿಹೊಳಿ ಅವರ ನಿಲುವನ್ನು ಪ್ರಶ್ನಿಸಬೇಕಿದೆ ಎಂದರು. ರಾಜ್ಯಪ್ರಧಾನ ಕಾರ‌್ಯದರ್ಶಿ ಸಿದ್ದರಾಜು ಮಾತನಾಡಿದರು.
ರಾಜ್ಯಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ,ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ,ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆ ಂಕಟೇಶ್,ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ,ಮುಖಂಡರಾದ ನವೀನ್ ಚಾಲುಕ್ಯ,ಜಯಪಾಲಯ್ಯ,ಶಂಕರಪ್ಪ,ಪ್ರೇಂಕುಮಾರ್ ಮತ್ತಿತರು ಇದ್ದರು. ಚಿತ್ರದುರ್ಗ ತಾಪಂ ಮಾಜಿ ಆಧ್ಯಕ್ಷ ವೇಣುಗೋಪಾಲ್ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.
ಜನನಾಯಕ ಮೋದಿಯನ್ನು ಬೆಂಬಲಿಸಿ
ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಪ್ರಧಾನ ಸೇವಕರಂತೆ ಶ್ರಮಿಸುತ್ತಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,ಅರುಣ್‌ಸಿಂಗ್ ಹೇಳಿದರು. ನಗರದ ಅಂಬೇ ಡ್ಕರ್ ಬೀದಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ‌್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿತರಿಸಿ ಮಾತನಾಡಿ,ಮೋ ದಿ ಅವರಿಂದಾಗಿ ರಾಷ್ಟ್ರದ ಚಿತ್ರಣವೇ ಬದಲಾಗಿದೆ. ಕೋಟ್ಯಂತರ ಜನರಿಗೆ ಉಚಿತ ಪಡಿತರ ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಕೋವಿಡ್ ಅವಧಿಯಲ್ಲಿ ಇದರ ಪ್ರಯೋಜನ ಪಡೆದವರ ಸಂಖ್ಯೆ ಹೆಚ್ಚು.
ರಾಜ್ಯದ ಬಿಜೆಪಿ ಸರ್ಕಾರವೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದೆ. ಡಬಲ್ ಇಂಜಿನ್ ಸರ್ಕಾರಗಳು ಮಾಡುತ್ತಿರುವ ಕಾರ‌್ಯ ಜನತೆಗೆ ತಿಳಿದಿದೆ. ಈಗಲೂ ಮತದಾರರು ಬಿಜೆಪಿ ಪರವಾಗಿದ್ದಾರೆ. ಇದಕ್ಕೆ ಹಲವೆಡೆ ಆಯೋಜಿಸುತ್ತಿರುವ ಯಾತ್ರೆ,ಸಮಾವೇಶಗಳಿಗೆ ಹರಿದು ಬರುತ್ತಿರುವ ಲಕ್ಷಾಂತರ ಜನರೇ ಸಾಕ್ಷಿ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು,ಅಶ್ವತ್ಥ ನಾರಾಯಣ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧ್ಯಕ್ಷ ಎ.ಮುರಳಿಧರ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮವೆಂಕಟೇಶ್,ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ಧಾಪುರ ಇತರರು ಇದ್ದರು.