ಜಿಲ್ಲೆ

ಜೆಡಿಎಸ್ ಸದಸ್ಯತ್ವ ಅಭಿಯಾನ ಆರಂಭ

ಬಳ್ಳಾರಿ : ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ದೇವದುರ್ಗಿ ಶಾಸಕಿ ಕರಿಯಮ್ಮ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೋರ್ ಕಮಿಟಿ, ಬೂತ್ ಮಟ್ಟದ ಕಮಿಟಿ ರಚನೆಗೆ ಪಕ್ಷದ ಮುಖಂಡರಾದ ಹೆಚ್. ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಚಾಲನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಮುಂದಿನ ದಿನಗಳಲ್ಲಿ ವಿಧಾನಸಭಾ, ಲೋಕಸಭಾ ಹಾಗೂ ಜಿಪಂ, ತಾಪಂ ಮಟ್ಟದ ಚುನಾವಣೆ ಹಿನ್ನೆಲೆ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಸದಸ್ಯತ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರಮುಖರಾದ ಜಿಲ್ಲಾದ್ಯಕ್ಷ ಮೀನಳ್ಳಿ ತಾಯಣ್ಣ, ಮುಖಂಡರಾದ ಕುರೆಕುಪ್ಪ ಸೋಮಪ್ಪ, ವಿರುಪಾಕ್ಷಪ್ಪ, ಮಹಾಂತೇಶ ಪಾಟೀಲ್ ಇದ್ದರು.