ಜೇವರ್ಗಿ: ಆಂದೋಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ಬಸಮ್ಮ ಮಾಚಣ್ಣ ಶಹಾಪುರ ಹಾಗೂ ಶರಬಯ್ಯ ನಾಯ್ಕಲ್ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 18 ಜನ ಸದಸ್ಯರಿದ್ದು, ಅಧ್ಯಕ್ಷ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎರಡು ಸ್ಥಾನಗಳಿಗೆ ಬಸಮ್ಮ, ಶರಬಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಅಂಬವ್ವ ಪೂಜಾರಿ ಘೋಷಿಸಿದರು. ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆಯಾಗಿದ್ದರಿಂದ ಗ್ರಾಪಂ ಕಚೇರಿ ಎದುರು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸುಭಾಷಗೌಡ ಇಮ್ಮಣ್ಣಿ, ಸೈಯ್ಯದ್ ಮುಸ್ತಾಕ್ ಜಮಾದಾರ, ಗೌಡಪ್ಪ ಟಕ್ಕಳಕಿ, ಸುರೇಶ ದೇಸಾಯಿ, ಅರುಣಕುಮಾರ ಅಂಗಡಿ, ವಿಶ್ವನಾಥ ಇಮ್ಮಣ್ಣಿ, ಸಿದ್ದಣ್ಣ ಅಣಬಿ, ಸಿದ್ದು ಸಾಹು ಅಂಗಡಿ, ವೀರಭದ್ರಯ್ಯ ದೊಡ್ಡಮನಿ, ಶರಣಪ್ಪ ಮಡ್ನಾಳ ಇತರರಿದ್ದರು.