ಜಿಲ್ಲೆ

ಜೆಡಿಎಸ್ ಮಹಿಳಾ ಘಟಕಕ್ಕೆ ಸಂಗೀತಾ ಅಧ್ಯಕ್ಷೆ

ಬೀದರ್: ಜಾತ್ಯತೀತ ಜನತಾ ದಳದ ಬೀದರ್ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸಂಗೀತಾ ವಿನೋದ್ ಪೆರಿಕಲ್ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ವಿಶ್ವನಾಥ ಕರಂಜಿ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕೂಡಲೇ ತಮ್ಮ ಜವಾಬ್ದಾರಿ ವಹಿಸಿಕೊಂಡು ಪಕ್ಷದ ಸಂಘಟನೆ ಬಲರ್ಧನೆಗೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ನೇಮಕಾತಿ ಪತ್ರ ವಿತರಣೆ: ನಗರದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಅವರು ಸಂಗೀತಾ ಅವರಿಗೆ ನೇಮಕಾತಿ ಪತ್ರ ವಿತರಿಸಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾಬಾಯಿ ಕರಂಜಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ನಗರ ಘಟಕದ ಅಧ್ಯಕ್ಷ ಸುಂದರರಾಜ್ ಸುದರ್ಶನ್, ಮುಖಂಡರಾದ ಶಾಂತಮ್ಮ, ಇಮ್ರಾನ್, ಸೈಯದ್ ಕಿರ್ಮಾನಿ ಮತ್ತಿತರರು ಇದ್ದರು.