ಸರಗೂರು: ಜೆಡಿಎಸ್ ಮತ್ತು ಬಿಜೆಪಿಯ ಹಲವು ಕಾರ್ಯಕರ್ತರು ಟೌನ್ ಅಧ್ಯಕ್ಷ ಎಸ್.ಎನ್. ನಾಗರಾಜು ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ದಿ.ಆರ್.ಧ್ರುವನಾರಾಯಣ ಅವರ ನಾಯಕತ್ವವನ್ನು ಒಪ್ಪಿ ಶಾಸಕ ಅನಿಲ್ ಚಿಕ್ಕಮಾದು ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಜೆಡಿಎಸ್, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಶುಕ್ರವಾರ ಸೇರ್ಪಡೆಗೊಂಡರು. ಎಸ್.ಎನ್.ನಾಗರಾಜು ಅವರು ಕಾಂಗ್ರೆಸ್ ಪಕ್ಷದ ಶಾಲು ಹೊದಿಸಿ ಆತ್ಮೀಯವಾಗಿ ಕಾರ್ಯಕರ್ತರನ್ನು ಬರಮಾಡಿಕೊಂಡರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಡಿ.ಪಿ.ನಟರಾಜು, ಮಾಜಿ ಪಪಂ ಸದಸ್ಯ ಎಸ್.ಎನ್.ನಾಗಯ್ಯ, ವೆಂಕಟಪ್ಪ, ಬಿಲ್ಲಯ್ಯ, ಕಾಳಿಪ್ರಸಾದ್, ಮುರಳಿ, ಶಿವರಾಜು, ವೆಂಕಟಪ್ಪ, ಗೋಪದಾಸಿ, ಸೋಮಣ್ಣ, ಬೋಗಯ್ಯ, ಮಹಾದೇವ, ಸತೀಶ್, ಆದಿಶೇಷ, ಹನುಮಂತ, ಮಹೇಶ್, ಮೂರ್ತಿ, ಮಂಜುನಾಥ ಇತರರಿದ್ದರು.