ಹೊಳೆನರಸೀಪುರ: ಜೆಡಿಎಸ್ ಪಕ್ಷದ ದಬ್ಬಾಳಿಕೆಗೆ ಒಳಗಾಗಿ ತುಳಿಯಲ್ಪಟ್ಟಿರುವ ತಾಲೂಕಿನ ಮುಖಂಡರು ನಿರ್ಭಯವಾಗಿ ಕಾಂಗ್ರೆಸ್ ಪಕ್ಷವನ್ನ ಸೇರಿಕೊಂಡಿದ್ದಾರೆ ನಮ್ಮ ಪಕ್ಷ ಎಲ್ಲ ರೀತಿಯ ಬೆಂಬಲ ಸಹಕಾರ ರಕ್ಷಣೆ ನೀಡುತ್ತದೆ ಯಾರು ಭಯಪಡುವ ಅಗತ್ಯವಿಲ್ಲ ಎಂದು ಸಂಸದ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಡಿಕೆ ಸುರೇಶ್ ಹೇಳಿದರು.
ಪಟ್ಟಣದ ಮಾಜಿ ಪುರಸಭೆ ಅಧ್ಯಕ್ಷ ಹೆಚ್ ವಿ ಪುಟ್ಟರಾಜು ಅವರ ಮನೆಯ ಆವರಣದಲ್ಲಿ ಬುಧುವಾರ ಏರ್ಪಡಿಸಿದ್ದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೊಳೆನರಸೀಪುರ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರ ದಬ್ಬಾಳಿಕೆ ದೌರ್ಜನ್ಯ ಮಿತಿ ಮೀರಿದ್ದರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಇರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಆದ್ದರಿಂದ ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು. ತಾಲೂಕಿನ ಜನತೆ ಬದಲಾವಣೆಯನ್ನು ಬಯಸಿದ್ದಾರೆ ತಮ್ಮ ಕಪಿಮುಷ್ಠಿಯಲ್ಲಿ ಪೊಲೀಸ್ ಕಂದಾಯ ಪುರಸಭೆ ಇಲಾಖೆಗಳನ್ನು ಇಟ್ಟುಕೊಂಡು ನಾಗರಿಕರಿಗೆ ಜೆಡಿಎಸ್ ನಾಯಕರು ಅನ್ಯಾಯ ಮಾಡುತ್ತಿದ್ದಾರೆ ಇದರ ವಿರುದ್ಧ ನಿರ್ಭಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿ ಬೆಂಬಲಿಸಿ ಗೆಲುವಿಗೆ ಕಾರಣರಾಗಬೇಕು ಎಂದು ಕರೆ ನೀಡಿದರು.
ಮಾಟ ಮಂತ್ರ, ನಿಂಬೆಹಣ್ಣು ಯಾವುದೇ ಪ್ರಯೋಜನಕ್ಕೂ ಬರುವುದಿಲ್ಲ ಅವರಿಗೆ ತಿರುಗುಬಾಣವಾಗಲಿದೆ ಎಂದು ಶಾಸಕ ಎಚ್ ಡಿ ರೇವಣ್ಣನವರನ್ನ ಕುರಿತು ಪರೋಕ್ಷವಾಗಿ ಹರಿಹಾಯ್ದರು. ನಮ್ಮೆಲ್ಲಾ ಕಾರ್ಯಕರ್ತರು ನಿಮಿಷಾಂಬ ದೇವಿಗೆ ನಿಂಬೆಹಣ್ಣು ಅರ್ಪಿಸಿಬಿಡಿ ನಿಂಬೆಹಣ್ಣು ಮಂತ್ರದವರಿಗೆ ತಿರುಗು ಬಾಣವಾಗಲಿ ಎಂದು ವ್ಯಂಗ್ಯವಾಡಿದರು. ತಾಲೂಕಿನ ಜಿಲ್ಲೆಯ ಕಾರ್ಯಕರ್ತರು ಯಾವುದೇ ಗೊಂದಲಗಳಿಗೆ ಬಲಿಯಾಗಬೇಡಿ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಪಕ್ಷ ಸಂಘಟಿಸಿ ಗೆಲ್ಲಿಸುವ ಕೆಲಸ ಮಾಡಿ ಎಂದರು ತಾಲೂಕಿನಲ್ಲಿ ಹಿಂದೆ ಸಾವಿರಾರು ಗುತ್ತಿಗೆದಾರರು ಇದ್ದು ಅವರೆಲ್ಲ ಕಾಣೆಯಾಗಿದ್ದಾರೆ ಆದರೆ ಮೂರು ಮಂದಿ ಮಾತ್ರ ಕಾಮಗಾರಿಗಳ ಗುತ್ತಿಗೆಯನ್ನು ಮಾಡುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ ಎಂದು ಶಾಸಕರ ಕುಟುಂಬವನ್ನು ಕುರಿತು ಪರೋಕ್ಷವಾಗಿ ಟೀಕಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಲ್ಲಿ ಸುಮಾರು 35 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದ ಮಾಜಿ ಪುರಸಭೆ ಅಧ್ಯಕ್ಷ ಹೆಚ್ ವಿ ಪುಟ್ಟರಾಜು (ಪುಟ್ಟಿ) ಅವರನ್ನು ಪಕ್ಷದ ಚಿಹ್ನೆ ಇರುವ ಬಾವುಟವನ್ನು ಹಸ್ತಾಂತರಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇದೇ ರೀತಿ ಚಂದ್ರಶೇಖರ್, ಓಲೆ ಕುಮಾರ್ , ಸತೀಶ್ ಗುರು ಲೋಕೇಶ್ ಮುಂತಾದ ನೂರಾರು ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡರು.
ಕಾರ್ಯಕ್ರಮಕ್ಕೂ ಮೊದಲುಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಸಂಸದ ಡಿಕೆ ಸುರೇಶ್ ಸಾವಿರಾರು ಕಾರ್ಯಕರ್ತರೊಡಗೂಡಿ ಮೆರವಣಿಗೆ ಮೂಲಕ ಡಾ. ಬಿ ಆರ್ ಅಂಬೇಡ್ಕರ್ , ಮಹಾತ್ಮ ಗಾಂಧೀಜಿ ಪುತ್ತಳಿ ಗೆ ಮಾಲಾರ್ಪಣೆ ಮಾಡಿದರು . ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು .
ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ ಎಚ್ ಲಕ್ಷ್ಮಣ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶ್ರೇಯಸ್ ಎಂ ಪಟೇಲ್, ಬಾಗೂರುಮಂಜೇಗೌಡ, ಶ್ರೀಧರ್ ಗೌಡ, ಸುರೇಶ್ ,ಹೊನ್ನಿ ಕೊಪ್ಪಲು ಮಂಜೇಗೌಡ ,ಬಾಗಿವಾಳು ಮಂಜೇಗೌಡ, ವಿಶ್ವನಾಥ್ ಇನ್ನು ಮುಂತಾದವರು ಉಪಸ್ಥಿತರಿದ್ದರು.