ವಿಜಯಪುರ: ನಗರದ ವಾರ್ಡ್ ನಂ.28ರಲ್ಲಿ ನೂತನವಾಗಿ ಆರಂಭಿಸಲಾದ ಕರ್ನಾಟಕ ಪ್ರದೇಶ ಜನತಾದಳ ಪಕ್ಷದ (ಜಾತ್ಯತೀತ) ಜನ ಸಂಪರ್ಕ ಕಚೇರಿಯನ್ನು ಶನಿವಾರ ಶಾಸಕ ಡಾ.ದೇವಾನಂದ ಚವ್ಹಾಣ ಉದ್ಘಾಟಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಪಾಟೀಲ ಮಾಡಗಿ, ಯುವ ಜನತಾದಳದ ಜಿಲ್ಲಾಧ್ಯಕ್ಷ ಸುನಿಲ ರಾಠೋಡ, ನಿಂಗನಗೌಡ ಸೊಲಾಪುರ, ಇಜಾಜಅಹ್ಮದ ಮುಕಬಿಲ್, ಕೌಸರ ಶೇಖ, ದಿಲವಾರ ಖಾಜಿ, ಶಮಷದಲಿ ಮುಲ್ಲಾ, ರೂಪಾ ಕುಂಬಾರ ಮತ್ತಿತರರಿದ್ದರು. ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಬಳಿಕ ಗಾಂಧಿ ನಗರದಲ್ಲಿರುವ ಹೈಮಾಸ್ಟ್ ದೀಪ ಅಳವಡಿಸುವ ಕಾಮಗಾರಿ ಭೂಮಿ ಪೂಜೆ ನೆರವೇರಿಸಲಾಯಿತು.