ಯಾದಗಿರಿ: ಜಿಲ್ಲೆಯಲ್ಲಿ ಕನಿಷ್ಠ ೨ ಲಕ್ಷ ಸದಸ್ಯತ್ವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಕರ‍್ಯಕರ್ತರು ಒಗ್ಗಟ್ಟಿನಿಂದ ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ನಗರದಲ್ಲಿ ಸೋಮವಾರ ಜಿ¯್ಲÁ ಜೆಡಿಎಸ್ ಪP್ಷÀದಿಂದ ಹಮ್ಮಿಕೊಂಡ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ತೊಂದರೆಗಳ ನಡುವೆ ರಾಜಕೀಯವಾಗಿ ಒಂದು ಸದೃಢ ಪ್ರಾದೇಶಿಕ ಪP್ಷÀವಾಗಿ ಜೆಡಿಎಸ್ ಉಳಿಯಲು ಪP್ಷÀದ ಕರ‍್ಯಕರ್ತರೇ ಕಾರಣ ಎಂದರು.
ಅAದಿನ ಜನತಾ ಪರಿವಾರ ಮತ್ತು ಇಂದಿನ ಜನತಾದಳ ರಾಜ್ಯಕ್ಕೆ ಮುಖ್ಯಮಂತ್ರಿ ಹಾಗೂ ದೇಶಕ್ಕೆ ಪ್ರಧಾನಮಂತ್ರಿಯನ್ನು ನೀಡಿದೆ. ಇಂತಹ ಪಕ್ಷವನ್ನು ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಮತ್ತು ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕೊಡುಗೆ ಮತ್ತು ಶ್ರಮ ಈ ಪಕ್ಷಕ್ಕೆ ಅಪಾರವಾಗಿದೆ. ಅಲ್ಲದೆ ಪಕ್ಷಕ್ಕೆ ಕರ‍್ಯಕರ್ತರೇ ಜೀವಾಳವಾಗಿದ್ದಾರೆ ಎಂದರು.
ಪP್ಷÀ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಪ್ರಮುಖ ಯೋಜನೆಗಳು ಅನುಷ್ಠಾನಗೊಂಡಿವೆ. ದೇವೇಗೌಡರ ಗರಡಿಯ¯್ಲೆÃ ರಾಜಕೀಯವಾಗಿ ಬೆಳೆದ ಹಲವಾರು ನಾಯಕರು ಇಂದು ಕಾಂಗ್ರೆಸ್-ಬಿಜೆಪಿಯಲ್ಲಿದ್ದಾರೆ. ಪP್ಷÀಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕರ‍್ಯಕರ್ತರನ್ನು ನಾಯಕರು ಎಂದೂ ಕೈ ಬಿಡುವುದಿಲ್ಲ. ಅದಕ್ಕೆ ಉದಾಹರಣೆ ನಮ್ಮ ಕುಟುಂಬ. ನಮ್ಮ ತಂದೆ ಹಾಗೂ ನನ್ನನ್ನು ನಿವೇಲ್ಲರೂ ಶಾಸಕರನ್ನಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದ್ದೀರಿ. ಇದು ಸಾಮಾನ್ಯ ಸಂಗತಿಯಲ್ಲ ಎಂದು ಕಂದಕೂರ ವಿವರಿಸಿದರು.
ರಾಜ್ಯ ಜೆಡಿಎಸ್ ಪP್ಷÀದ ಕೋರ್ ಕಮಿಟಿ ಸದಸ್ಯೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಜಿ¯್ಲÁ ಉಸ್ತುವಾರಿ ಸುನೀತಾ ದೇವಾನಂದ ಚವ್ಹಾಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಡಿಎಸ್ ಜಿ¯್ಲÁಧ್ಯP್ಷÀ ಚನ್ನಪ್ಪಗೌಡ ಮೋಸಂಬಿ, ಮಹ್ಮದ್ ಅನ್ಸಾರೊದ್ದೀನ್ ಅನ್ಸಾರಿ, ಶಾಂತು ಜಾಧವ್, ನಾಗರತ್ನ ಅನಪುರ, ಬನದಪ್ಪ ಅರಳಿ, ಕೃಷ್ಣಾ ಮಂಗಿಹಾಳ, ಶ್ರವಣಕುಮಾರ ನಾಯಕ, ಬಾಲಮಿತ್ರ, ವಿಠಲï ವಗ್ಗಿ, ಪ್ರಕಾಶ ನೀರಟ್ಟಿ ಇತರರಿದ್ದರು.
ಜೆಡಿಎಸ್ ಮುಖಂಡ ಸುಭಾಶಚಂದ್ರ ಕಟಕಟಿ ಹೊನಗೇರಾ ಮಾತನಾಡಿದರು. ಮುಖಂಡ ವಿಶ್ವನಾಥ ಶಿರವಾರ ಸ್ವಾಗತಿಸಿದರು. ಮಲ್ಲಣ್ಣಗೌಡ ಹಳಿಮನಿ ಕೌಳೂರ ವಂದಿಸಿದರು. ಮಲ್ಲಿಕಾರ್ಜುನ ಅರುಣಿ ನಿರೂಪಿಸಿದರು.