ಜಿಲ್ಲೆ

ಜೆಡಿಎಸ್ ಕ್ಷೇತ್ರವಾರು ಉಸ್ತುವಾರಿ ನೇಮಕ

ಬೀದರ್: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ ಆದೇಶ ಹೊರಡಿಸಿದ್ದಾರೆ.

ಉಸ್ತುವಾರಿಗಳ ವಿವರ: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಹುಲಸೂರು: ಎಂ.ಜಿ. ಮುಳೆ, ಶಬ್ಬೀರ್ ಪಾಷಾ ಮುಜಾವರ್, ರಾಜಕುಮಾರ ಸುಗುರೆ, ಆಕಾಶ ಖಂಡಾಳೆ ಹಾಗೂ ಆನಂದ ಪಾಟೀಲ್. ಭಾಲ್ಕಿ ಕ್ಷೇತ್ರ: ಪ್ರಕಾಶ ಖಂಡ್ರೆ, ಸಿದ್ರಾಮಪ್ಪ ವಂಕೆ ಮತ್ತು ಗೋವಿಂದರಾವ ಬಿರಾದಾರ. ಔರಾದ್ ಹಾಗೂ ಕಮಲನಗರ: ತಾನಾಜಿ ತೋರಣೆಕರ್, ಮಲ್ಲಿಕಾರ್ಜುನ ಶೆಟಕಾರ, ಮುನೀರ್ ಸಾಬ್. ಹುಮನಾಬಾದ್ ಹಾಗೂ ಚಿಟಗುಪ್ಪ: ನಸೀಮೊದ್ದೀನ್ ಪಟೇಲ್, ಮುಜೀಬೊದ್ದೀನ್ ಪಟೇಲ್, ಮಹೇಶ ಅಗಡಿ, ಸುರೇಶ ಸೀಗಿ, ಶಿವಪುತ್ರ ಮಾಳಗೆ. ಬೀದರ್ ದಕ್ಷಿಣ: ಮುಜೀಬೊದ್ದೀನ್ ಪಟೇಲ್, ಶಿವರಾಜ ಹುಲಿ, ಅಶೋಕ ಪಾಟೀಲ್ ಸಂಗೊಳಗಿ, ಸಂಜೀವರೆಡ್ಡಿ ನಿರ್ಣಾ, ಮಹ್ಮದ್ ಇಸ್ಮಾಯಿಲ್ ಕಮಠಾಣ, ಸಂತೋಷ ರಾಸೂರೆ, ಬಾಬುರಾವ್ ಮಲ್ಕಾಪುರೆ. ಬೀದರ್ ಕ್ಷೇತ್ರ: ಅಶೋಕಕುಮಾರ ಕರಂಜಿ, ಸೋಮನಾಥ ಕಂದಗೂಳೆ, ಮಾರುತಿ ಬೌದ್ಧೆ, ರಾಜಕುಮಾರ ಶಿವಪೂಜೆ.