ಕೆ.ಎಂ.ದೊಡ್ಡಿ: ಜೆಡಿಎಸ್ ಪಕ್ಷ ಕುರಿತು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಇಲ್ಲಿನ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ನರೇಂದ್ರಸ್ವಾಮಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿರುವ ನರೇಂದ್ರಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷವು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ ಮಾತನಾಡಿ, ಜೆಡಿಎಸ್ ಬಗ್ಗೆ ಮಾತನಾಡಲು ನರೇಂದ್ರಸ್ವಾಮಿ ಅವರಿಗೆ ನೈತಿಕ ಹಕ್ಕಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ವಿರುದ್ಧ ಸೋತು ಪುಟ್ಗೋಸಿಯನ್ನು ತೊಡುವಂತಾಗುತ್ತದೆ ಎಂದು ಟೀಕಿಸಿದರು.
ಮುಖಂಡ ಅಣ್ಣೂರು ನವೀನ್ ಮಾತನಾಡಿ, ಮಾಜಿ ಸಚಿವ ನರೇಂದ್ರಸ್ವಾಮಿ ಜಾತಿವಾದಿ. ಕಾಂಗ್ರೆಸ್ ಪಕ್ಷದ ವರಿಷ್ಠರು ಅವರ ವಿರುದ್ಧ ಶಿಸ್ತು ಕ್ರಮಕೈಗೊಂಡು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದರು.
ಮುಖಂಡ ಎಚ್.ಎಂ.ಮರಿಮಾದೇಗೌಡ ಮಾತನಾಡಿ, ನರೇಂದ್ರಸ್ವಾಮಿ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಜಿಪಂ ಮಾಜಿ ಸದಸ್ಯ ಎ.ಟಿ.ಬಲ್ಲೇಗೌಡ, ತಾಪಂ ಮಾಜಿ ಅಧ್ಯಕ್ಷ ಹೊನ್ನಾಯಕನಹಳ್ಳಿ ಶಿವಶಂಕರ್, ಮುಖಂಡರಾದ ಕೆ.ಟಿ.ಸುರೇಶ್, ಮೆಳ್ಳಹಳ್ಳಿ ಕರಿಯಪ್ಪ, ಹೊಂಡ ಸಿದ್ದೇಗೌಡ, ಅಣ್ಣೂರು ವಿನು, ಗುಡಿಗೆರೆ ರಾಘವೇಂದ್ರ, ವಿಜಯಮ್ಮ, ತೊರೆ ಬೊಮ್ಮನಹಳ್ಳಿ ಶ್ರೀನಿವಾಸ್, ಕಾರ್ಕಹಳ್ಳಿ ಜಗದೀಶ್, ಮುಟ್ಟನಹಳ್ಳಿ ಕಾಳೇಗೌಡ, ಕುರಿಕೆಂಪನದೊಡ್ಡಿ ತೈಲಪ್ಪ ಶಿವಲಿಂಗ, ಕೆ.ಪಿ.ದೊಡ್ಡಿ ಮಂಜು, ಗೌಡಯ್ಯನದೊಡ್ಡಿ ಬಲ್ಲೇಗೌಡ, ಅಣ್ಣೂರು ಯೋಗೇಂದ್ರ, ದೇವಿಪುರ ಸ್ವಾಮಿ, ಮುಡೀನಹಳ್ಳಿ ತಿಮ್ಮೇಗೌಡ, ಹೊನ್ನಾಯಕನಹಳ್ಳಿ ಉಮೇಶ, ಶಿವಶಂಕರ್, ಆಸರೆ ರಘು ವೆಂಕಟೇಗೌಡ, ಮೆಳ್ಳಹಳ್ಳಿ ಶ್ರೀನಿವಾಸ್, ಯಡಗನಹಳ್ಳಿ ಕೃಷ್ಣ ಇದ್ದರು.