ಮಿರ್ಲೆ ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಾರಾ ಮಹೇಶ್ ಚಾಲನೆ ನೀಡಿದರು. ರಾಧಾಕೃಷ್ಣ, ಧನಂಜಯ್, ಮುರಳಿಧರ ಇತರರು ಇದ್ದರು. 
ಜಿಲ್ಲೆ

ಜೆಡಿಎಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಅಭಿವೃದ್ಧಿಗೆ ಶ್ರಮ

ಸಾಲಿಗ್ರಾಮ: ಜೆಡಿಎಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಹೆಚ್ಚು ಅನುದಾನ ತರುವ ಮೂಲಕ ರಸ್ತೆಗಳನ್ನು ಅಭಿವೃದ್ಧಿ ಮಾಡಿಸಿದ್ದೇನೆ ಎಂದು ಶಾಸಕ ಸಾರಾ ಮಹೇಶ್ ಹೇಳಿದರು.

ಮಿರ್ಲೆ ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2.50 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಹಾಸ್ಟೆಲ್ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಪಿಡಬ್ಲುೃಡಿ ಇಲಾಖೆಯಿಂದ 1 ಕೋಟಿ ರೂ. ಹಾಗೂ ಜಿಪಂ ವತಿಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಗುಣಮಟ್ಟ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಸ್ತೆಗಳ ಅಭಿವೃದ್ಧಿಗೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳಿಗೆ ನೂರು ಕೋಟಿ ರೂ. ಅನುದಾನ ತಂದಿದ್ದೆ. ಆದರೆ ಬೇರೆ ಸರ್ಕಾರಗಳಲ್ಲಿ ಹೆಚ್ಚು ಅನುದಾನ ತರುವುದು ಕಷ್ಟ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ತರುವಂತೆ ಮನವಿ ಮಾಡಿದರು.
ಮುಖಂಡರಾದ ಧನಂಜಯ್, ರಾಧಾಕೃಷ್ಣ, ಅರವಿಂದ್, ಹೊಸಟ್ಟಿರಘು, ವಾಸು, ಮೋಹನ್ ಮಂಜುನಾಥ್, ಲೋಕೇಶ್, ಪ್ರಕಾಶ್, ತುಕಾರಾಂ, ಗ್ರಾಪಂ ಅಧ್ಯಕ್ಷೆ ನೇತ್ರಾ, ಮಾಜಿ ಅಧ್ಯಕ್ಷ ಮಹದೇವ್, ಸದಸ್ಯರಾದ ಬಾಲು, ಅರುಣ್, ಮಂಡೂರ್ ಕುಮಾರ್, ಇಂಜಿನಿಯರ್ ಲಿಖಿತಾ, ಗುತ್ತಿಗೆದಾರ ಮುರಳಿಧರ, ಮಂಜುಳಾ ಇದ್ದರು.