ಜಿಲ್ಲೆ

ಜೆಎಸ್‌ಎಸ್ ವಿದ್ಯಾರ್ಥಿನಿಯರು ಆಯ್ಕೆ

ಚಾಮರಾಜನಗರ: ತಮಿಳುನಾಡು ಚೆನ್ನೈನಲ್ಲಿ ಅ.29 ರಿಂದ ನ.02 ರವರೆಗೆ ನಡೆಯಲಿರುವ 2025-26ನೇ ಸಾಲಿನ ದಕ್ಷಿಣ ವಲಯ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಕಬ್ಬಡಿ ಪಂದ್ಯಾವಳಿಗೆ ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಥಮ ಎಂಕಾಂ ವಿದ್ಯಾರ್ಥಿನಿ ಪಿ.ಪ್ರಿಯಾ ಮತ್ತು ಪ್ರಥಮ ಬಿಕಾಂ ವಿದ್ಯಾರ್ಥಿನಿ ಎನ್.ನವ್ಯಾ ಅವರು ಆಯ್ಕೆಯಾಗಿದ್ದು, ಚಾಮರಾಜನಗರ ವಿಶ್ವವಿದ್ಯಾನಿಲಯಯನ್ನು ಪ್ರತಿನಿಧಿಸುತ್ತಿದ್ದಾರೆ.

ಕ್ರೀಡಾಪಟುಗಳಿಗೆ ಪ್ರಾಂಶುಪಾಲರು, ಕ್ರೀಡಾ ಸಮಿತಿ ಅಧ್ಯಾಪಕರು ಹಾಗೂ ಅಧ್ಯಾಪಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಳಿಸಿದ್ದಾರೆ.