ಕೊಳ್ಳೇಗಾಲ: ಪಟ್ಟಣದ ಜೆಎಸ್‌ಎಸ್ ಕಾಲೇಜಿನಲ್ಲಿ ವೀರಶೈವ ಮಹಿಳಾ ವೇದಿಕೆ ಹಾಗೂ ಅಕ್ಕನಬಳಗದ ವತಿಯಿಂದ ಶನಿವಾರ ಅಕ್ಕ ಮಹಾದೇವಿ ಜಯಂತಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗುಂಡೇಗಾಲ ಪಟ್ಟದ ಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ, ಅಕ್ಕಮಹಾದೇವಿ ಅವರು ಶರಣರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಚನ ಸಾಹಿತ್ಯದ ಪ್ರಮುಖರಲ್ಲಿ ಅವರು ಒಬ್ಬರು ಎಂದರು.
ಅಕ್ಕನ ಬಳಗದ ಗೌರಾವಧ್ಯಕ್ಷೆ ಹಾಗೂ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಅಕ್ಕನ ಬಳಗದ ಅಧ್ಯಕ್ಷೆ ಅರುಣ ಕಾರ್ತಿಕ್, ಕಾರ್ಯದರ್ಶಿ ಸವಿತಾ ಲೋಕೇಶ್, ರೂಪಾ ತೋಟೇಶ್, ಲೀಲಾವತಿ ಶಿವಕುಮಾರ್, ಸುಮಾ ವೀರಭದ್ರ ಮತ್ತಿತರಿದ್ದರು.