ಚಿತ್ರದುರ್ಗ: ನಗರದ ನಮ್ಮ ಎಕ್ಸ್‌ಪರ್ಟ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಜೆಇಇ) ಮೈನ್ಸ್‌ನಲ್ಲಿ ಉತ್ತಮ ರ್ಯಾಂಕ್ ಗಳಿಸಿದ್ದು, 15 ವಿದ್ಯಾರ್ಥಿಗಳೂ ಅರ್ಹತೆ ಪಡೆದುಕೊಂಡಿದ್ದಾರೆ.
ಕಾಲೇಜಿನ ಬಿ.ಟಿ.ಸಾತ್ವಿಕ್ 646 ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿಗಳಾದ ನೇತ್ರಾವತಿ 2997, ಟಿ.ಎಂ.ಕುಮಾರ್, ತಿಪ್ಪೇಶ್ 5350, ಆರ್.ವರ್ಷಿಣಿ 8609 ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ನಿರ್ದೇಶಕ ಎ.ಮುರಳಿ ಪ್ರಸನ್ನಕುಮಾರ್ ಮಾತನಾಡಿ, ಯಾವುದೇ ಸಾಧನೆಯಾಗಲಿ ತಪಸ್ಸಿದಂತೆ. ಪಿರಿಯಾಡಿಕಲ್ ಎಕ್ಸಾಂ, ಕೌನ್ಸಿಲಿಂಗ್ ಸಿಸ್ಟಮ್, ಆನ್‌ಲೈನ್ ಎಕ್ಸಾಂ, ತರಬೇತಿ ನೀಡಿದ್ದರ ಫಲ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅವಿಸ್ಮರಣೀಯ ಸಾಧನೆಗೈಯಲು ಸಾಧ್ಯವಾಯಿತು ಎಂದು ತಿಳಿಸಿದರು.
ಕಾಲೇಜಿನ ಡೀನ್ ವಿಠ್ಠಲ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನೈಪುಣ್ಯತೆ, ವೈಯಕ್ತಿಕ ಅಭ್ಯಾಸ, ತರಬೇತಿ ವೇಳೆ ಏಕಾಗ್ರತೆ ಸಾಧಿಸಿದ್ದರ ಫಲ ಉತ್ತಮ ರ್ಯಾಂಕ್‌ಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಅರುಣ್‌ಕುಮಾರ್ ಮಾತನಾಡಿ, ಈ ಬಾರಿಯ ಫಲಿತಾಂಶ ತೃಪ್ತಿ ತಂದುಕೊಟ್ಟಿದೆ. ಆದರೂ ಇದಕ್ಕಿಂತ ಅತ್ಯುತ್ತಮ ಫಲಿತಾಂಶ ಮುಂದಿನ ಬಾರಿ ಪಡೆಯಲು ತರಬೇತುದಾರರು, ಸಿಬ್ಬಂದಿ, ವಿದ್ಯಾರ್ಥಿಗಳು ಶ್ರಮಿಸುವ ನಿಟ್ಟಿನಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.