ಚಿತ್ರದುರ್ಗ: ಜೆಇಇ ಅಡ್ವಾನ್ಸ್-2025ರ ಫಲಿತಾಂಶದಲ್ಲಿ 34ನೇ ರ‌್ಯಾಂಕ್ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ನಗರದ ಎಸ್‌ಆರ್‌ಎಸ್ ಪಿಯು ಕಾಲೇ ಜು ವಿದ್ಯಾರ್ಥಿ ಕೆ.ಪಿ.ಪೂಜಿತ್‌ಕುಲಾಲ್ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಕ್ರಮವಾಗಿ ತ್ರಿವೇಣಿ-502,ಎನ್.ವೈ.ಆನಂದ್-559,ಎನ್.ವಿ.ಹರ್ಷಿತ್‌ರಾಜ್-1083,ಟಿ.ಎಂ.ರಕ್ಷಿತಾ 1947 ಹಾಗೂ ವಿಕಾಸ್ ಜಿ ನಾಯ ಕ್-3748ನೇ ರ‌್ಯಾಂಕ್‌ಗಳೊಂದಿಗೆ ದಾಖಲೆ ನಿರ್ಮಿಸಿದ್ದಾರೆ ಎಂದು ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅ ವರು ಹರ್ಷ ವ್ಯಕ್ತಪಡಿಸಿದ್ದಾರೆ.
40 ವಿದ್ಯಾರ್ಥಿಗಳಲ್ಲಿ, 21ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆಯುತ್ತಿರುವುದು ಐತಿಹಾಸಿಕ ದಾಖಲೆಯಾಗಿದೆ ರಾಷ್ಟ್ರ ಮಟ್ಟದ ಜೆಇಇ ಅ ಡ್ವಾನ್ಸ್ ಪರಿಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್‌ಗಳೊಂದಿಗೆ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿ,ಐಐಟಿ ಹಾಗೂ ಐಐಐಟಿಗಳಿಗೆ ನಮ್ಮ ಕಾಲೇಜು ವಿದ್ಯಾರ್ಥಿಗಳು ಅರ್ಹತೆಗಳಿಸಿರುವುದು ವಿಶೇಷವಾಗಿದೆ. ಇದರೊಂದಿಗೆ ರಾಷ್ಟ್ರಮಟ್ಟದಲ್ಲಿ ಅತೀ ಹೆಚ್ಚು ರ‌್ಯಾಂಕ್‌ಗಳನ್ನು ದಾಖಲಿಸಿದ ಮಧ್ಯ ಕ ರ್ನಾಟಕದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಎಸ್‌ಆರ್‌ಎಸ್‌ಪಿಯು ಕಾಲೇಜು ಪಾತ್ರವಾಗಿದೆ ಎಂದು ಲಿಂಗಾರೆಡ್ಡಿ ಹೇಳಿಕೆಯಲ್ಲಿ ಸಂಭ್ರಮಿಸಿ ದ್ದಾರೆ.
ವಿದ್ಯಾರ್ಥಿಗಳನ್ನು ಗೌರವಿಸಿದ ಸಂದರ್ಭದಲ್ಲಿ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ,ಪ್ರಾಚಾರ‌್ಯ,ಶೇಖರ್‌ರೆಡ್ಡಿ,ಉಪ ಪ್ರಾಚಾರ‌್ಯ ಮನೋ ಜ್ ಹಾಗೂ ಪಾಲಕರು ಇದ್ದರು.