ವಿಜಯಪುರ: ನಾಗಠಾಣ ಮತಕ್ಷೇತ್ರದ ಶಾಸಕ ಡಾ. ದೇವಾನಂದ್ ಚವ್ಹಾಣ ಅವರು ಇಂದು ವಿಜಯಪುರ ಜಿಲ್ಲಾ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಬೇಕು, ಎಲ್ಲರೂ ಸೇರಿ ಪಕ್ಷವನ್ನು ಬಲಪಡಿಸಬೇಕು ಎಂದು ಶಾಸಕರು ಕಾರ್ಯಕರ್ತರಿಗೆ ಮನವಿ ಮಾಡಿದ್ರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸನಗೌಡ ಮಾಡಗಿ, ಜಿಲ್ಲಾ ಪಕ್ಷದ ಚುನಾವಣೆ ಅಧಿಕಾರಿ ರಿಯಾಜ್ ಪಾರೂಕಿ, ಯುವ ಜಿಲ್ಲಾ ಅಧ್ಯಕ್ಷ ಸುನಿಲ್ ರಾಠೋಡ, ಮಹಿಳಾ ಜಿಲ್ಲಾ ಅದ್ಯಕ್ಷೆ ಸ್ನೇಹಲತಾ ಶೆಟ್ಟಿ, ವಿಜಯಪುರ ತಾಲೂಕ ಅದ್ಯಕ್ಷ ನಿಂಗನಗೌಡ ಸೋಲಾಪೂರ,ಚಡಚಣ ತಾಲೂಕ ಅಧ್ಯಕ್ಷ ಅಮಸಿದ್ದ ಬಳಗಾನೂರ, ಮುಖಂಡರಾದ ಅಜೀಜ್ ಮಕಬಿಲ್, ಸುಭಾಸ ನಾಯಕ, ಗುಲಾಬ ಚವ್ಹಾಣ, ಶಿವು ಹೀರೆಕುರಬುರ, ರೂಪಾ ಕುಂಬಾರ, ರೇಣುಕಾ ಮಡಿವಾಳ, ಸಾಜೀದ ರಿಷಲ್ದಾರ ಉಪಸ್ಥಿತರಿದ್ದರು.