ಜಿಲ್ಲೆ

ಜೂನ್ 28ರಂದು ಹಾಸನ ರೋಟರಿ ಜಿಲ್ಲಾ ಗವರ್ನರ್ ಪದಗ್ರಹಣ

ಹಾಸನ: ರೋಟರಿ ಜಿಲ್ಲೆ 3182ರ ನೂತನ ಜಿಲ್ಲಾ ಗವರ್ನರ್ ಆಗಿ ರೊ.ಪಾಲಾಕ್ಷ ಅವರು ಶನಿವಾರ ಪದಗ್ರಹಣ ಮಾಡಲಿದ್ದಾರೆ. ಜೂ.28ರ ಶನಿವಾರ ಸಂಜೆ ನಗರದ ಹೊಳೆನರಸೀಪುರ ರಸ್ತೆಯ ಪವನ ಪುತ್ರ ಕನ್ವೆನ್ಷನ್ ಹಾಲನಲ್ಲಿ ಸಂಜೆ 6ಗಂಟೆಯಿಂದ ಪದಗ್ರಹಣ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದಲ್ಲಿ ರೋಟರಿ ಇಂಟರ್‌ನ್ಯಾಷನಲ್ ಡೈರೆಕ್ಟರ್ ರೊ. ಕೆ.ಪಿ.ನಾಗೇಶ್ ಪದಗ್ರಹಣ ಕಾರ್ಯಕ್ರಮ ನಡೆಸಿಕೊಡಲಿದ್ದು, ನಿರ್ಗಮಿತ ಜಿಲ್ಲಾ ಗವರ್ನರ್ ಸಿ.ಎ. ದೇವಾನಂದ್ ಉಪಸ್ಥಿತಿ ಇರಲಿದೆ. ಮುಖ್ಯ ಅತಿಥಿಗಳಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ಶ್ರೀ ಕ್ಷೇತ್ರ ಧರ್ಮಕತೃ ಭೀಮೇಶ್ವರ್ ಜೋಶಿ, ರೋಟರಿ ಮಾಜಿ ಜಿಲ್ಲಾ ಗವರ್ನರ್‌ಗಳಾದ ರೊ.ಅಭಿನಂದನ್ ಎ ಶೆಟ್ಟಿ, ರೊ.ರಾಜಾರಾಮ್ ಭಟ್, ರೊ.ಬಿ.ಎನ್ ರಮೇಶ್, ರೊ.ಗೋವರ್ಧನ್ ಕುಮಾರ್, ಮುಂದಿನ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಗಳಾದ ರೊ.ಬಿ.ಎಂ ಭಟ್, ರೊ.ವಸಂತ್ ಹೊಬ್ಳಿದಾರ್, ರೋಟರಿ ಕ್ಲಬ್ ಆಫ್ ಹಾಸನ್ ನಿಯೋಜಿತ ಅಧ್ಯಕ್ಷ ರೊ.ಡಿ.ಆರ್. ಮಹೇಶ್, ರೋಟರಿ ಜಿಲ್ಲೆ 3182 ಜೋನ್ 9ರ ಅಸಿಸ್ಟೆಂಟ್ ಗವರ್ನರ್ ರೊ.ಜೆ.ಎನ್. ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರೋಟರಿ ಜಿಲ್ಲೆ 3182ರ ವ್ಯಾಪ್ತಿಗೆ ಬರುವ ರೆವಿನ್ಯೂ ಜಿಲ್ಲೆಗಳಾದ ಹಾಸನ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ರೊಟೇರಿಯನ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಕಾರ್ಯದರ್ಶಿ ರೊ.ಡಿ.ಎಂ ಜಲೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.