ಜಿಲ್ಲೆ

ಜೂ.೮ರಂದು ಬೃಹತ್ ಜೈನ ಸಮಾವೇಶ

ರಾಯಬಾಗ: ಜೈನ ಸಮುದಾಯದ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಕಾಗವಾಡ ತಾಲೂಕಿನ ಐನಾಪುರದಲ್ಲಿ ಜೂ.೮ರಂದು ಆಚಾರ್ಯ ಶ್ರೀ ಗುಣಧರ ನಂದಿ ಮುನಿಮಹಾರಾಜರ ನೇತೃತ್ವದಲ್ಲಿ ಜೈನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅರಿಹಂತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಹಿರಿಯ ಮುಖಂಡ ಡಿ.ಸಿ. ಸದಲಗಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೈನ ಅಭಿವೃದ್ಧಿ ನಿಗಮ ಸ್ಥಾಪನೆ, ಜೈನ ದಿಗಂಬರ ಮುನಿಗಳಿಗೆ ರಕ್ಷಣೆ ಒದಗಿಸುವುದು. ರಾಜಕೀಯ, ಸಾಂಸ್ಕೃತಿಕವಾಗಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದು. ಪ್ರಾಚೀನ ಜೈನ ಬಸದಿಗಳನ್ನು ಜೀರ್ಣೋದ್ಧಾರ ಮಾಡುವುದು. ರಾಜ್ಯ ಸರ್ಕಾರ ಕೈಗೊಂಡಿರುವ ಜನಗಣತಿಯಲ್ಲಿ ಸಮುದಾಯದ ಜನಸಂಖ್ಯೆ ಅಂಕಿಅAಶ ತಪ್ಪಾಗಿರುವುದನ್ನು ಸರಿಪಡಿಸಲು ಒತ್ತಾಯಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಸಮಾವೇಶ ಆಯೋಜಿಸಲಾಗಿದ್ದು, ರಾಜ್ಯಪಾಲ ಥಾವರಚಂದ ಗೆಹಲೋತ್ ಹಾಗೂ ಭಟ್ಟಾರಕರು ಆಗಮಿಸಲಿದ್ದಾರೆ ಎಂದರು.

ಮುಖಂಡರಾದ ದಶರಥ ಶೆಟ್ಟಿ, ಶೀತಲ ಬೇಡಕಿಹಾಳೆ, ಧೂಳಗೌಡ ಪಾಟೀಲ, ಸಂಜಯ ಬಡೋರೆ, ಪಾರೀಶ ಉಗಾರೆ, ನೇಮಿನಾಥ ಅಸ್ಕಿ, ಧನಪಾಲ ಅಲಗೊಂಡ, ಅಣ್ಣಾಸಾಬ ಪಾಟೀಲ, ಸಂಜು ಹಂಜೆ, ಅಣ್ಣಾಸಾಬ ಖೆಮಲಾಪುರೆ, ಸಿದ್ದಪ್ಪ ನಾಗನೂರೆ, ಬಾಹುಬಲಿ ಪರಮಗೌಡ, ಬಸಗೌಡ ನಾಗನೂರ, ಪ್ರಕಾಶ ಬೋಳಗೌಡ, ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ, ಉತ್ತಮ ಕಾಮಗೌಡ, ಆದಿನಾಥ ಶೆಟ್ಟಿ, ಸೂರ್ಯಕಾಂತ ಬಿರಾಜ ಇದ್ದರು.