ಬಾಗಲಕೋಟೆ: ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರ ೬೦ನೇ ವರ್ಧಂತಿ ಮಹೋತ್ಸವವು ಶ್ರೀಗಳ ಸಾನ್ನಿದ್ಯದಲ್ಲಿ ಜೂ.೨೦ ರಿಂದ ಜೂ.೨೭ರವರೆಗೆ ಕೋಟೆನಗರಿಯಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯ ಶ್ರೀರಾಮ ಮಂದಿರದ ಟ್ರಸ್ಟಿಗಳೂ ಆಗಿರುವ ಶ್ರೀಗಳು ಗೋಶಾಲೆ, ವಿಕಲಚೇತನ ಮಕ್ಕಳ ಪಾಲನಾ ಕೇಂದ್ರ, ಶಿಕ್ಷಣ ಸಂಸ್ಥೆ, ಶಾಸ್ತç ಸೇವೆ, ಧಾರ್ಮಿಕ ಕೇಂದ್ರಗಳ ಮೂಲಕ ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಶ್ರೀಗಳ ೬೦ ನೇ ವರ್ಧಂತಿ ಅತ್ಯಂತ ವಿಜೃಂಭಣೆಯಿ0ದ ಏರ್ಪಡಿಸಲಾಗಿದೆ ಎಂದರು.
ಜೂ.೨೦ರAದು ಸಂಜೆ ೫.೩೦ ಗಂಟೆಗೆ ಶ್ರೀಗಳು ಪುರ ಪ್ರವೇಶಿಸಲಿದ್ದು, ವಿದ್ಯಾಗಿರಿ ಕಾಲೇಜು ಸರ್ಕಲ್‌ನಿಂದ ವಿಪ್ರ ಅಭಿವೃದ್ಧಿ ಸಂಘದ ರಾಯರ ಮಠದವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ. ೬.೩೦ ಗಂಟೆಗೆ ಪಂ.ಆನAದತೀರ್ಥಾಚಾರ್ಯ ನಾಗಸಂಪಗಿ ಅವರು ಪ್ರವಚನ ನೀಡಲಿದ್ದು, ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ಜರುಗಲಿದೆ ಎಂದು ತಿಳಿಸಿದರು.
ಜೂ.೨೧ ರಂದು ಸಂಜೆ ೬ ರಿಂದ ೮.೩೦ರವರೆಗೆ ಬೆಂಗಳೂರಿನ ಪಂ.ರಾಮವಿಠ್ಠಲಾಚಾರ್ಯರಿAದ ಉಪನ್ಯಾಸ, ಜೂ.೨೨ರಂದು ಸಂಜೆ ಪಂ. ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ ಅವರಿಂದ ಪ್ರವಚನ, ಜೂ.೨೩ ರಂದು ಸಂಜೆ ಪಂ.ಮಧ್ವಾಚಾರ್ಯ ಮೊಕಾಶಿ ಅವರಿಂದ ಪ್ರವಚನ, ಜೂ.೨೪ರ ಸಂಜೆ ಚಕ್ರವರ್ತಿ ಸೂಲಿಬೆಲೆ ಅವರಿಂದ ಲೌಕಿಕ ಉಪನ್ಯಾಸ, ಜೂ.೨೫ ರಂದು ಸಂಜೆ ಪಂ.ಕೃಷ್ಣರಾಜ ಕುತ್ಪಾಡಿಯಾಚಾರ್ಯರಿಂದ ಉಪನ್ಯಾಸ, ಜೂ.೨೬ ರಂದು ಬೆಂಗಳೂರಿನ ಪಂ.ಬ್ರಹ್ಮಣಾಚಾರ್ಯರಿAದ ಪ್ರವಚನ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಸಂಜೆ ಪ್ರವಚನ ಕಾರ್ಯಕ್ರಮಗಳು ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ಆವರಣದಲ್ಲಿ ಜರುಗಲಿವೆ ಎಂದು ಮಾಹಿತಿ ನೀಡಿದರು.
ಜೂ.೨೭ ರಂದು ಬೆಳಗ್ಗೆ ೭ ರಿಂದ ೧೦.೩೦ ವರೆಗೆ ಪಾದಪೂಜೆ ಜರುಗಲಿದೆ. ಶ್ರೀಗಳಿಂದ ಪ್ರತಿದಿನ ಶ್ರೀಮಧ್ವಕರಾರ್ಚಿತ ಶ್ರೀರಾಮವಿಠ್ಠಲ ದೇವರ ಪೂಜೆ ಜರುಗಲಿದೆ. ಶ್ರೀಗಳು ಸಾಮಾಜಿಕ ಕ್ಷೇತ್ರದಲ್ಲಿ ಅದರಲ್ಲೂ ಹಿಂದೂ ಸಮಾಜದ ಸಂಘಟನೆಯಲ್ಲಿ ತೊಡಗಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ ಮಾತನಾಡಿ, ಶ್ರೀಗಳ ಕಾರ್ಯಕ್ರಮವು ನಗರದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಸಕಲ ಹಿಂದೂ ಸಮಾಜದ ಸಂಘಟನೆಗೆ ಶ್ರೀಗಳು ಶ್ರಮಿಸುತ್ತಿದ್ದಾರೆ. ಅಯೋಧ್ಯೆ ರಾಮಮಂದಿರ ನಿರ್ಮಾಣದ ನಂತರ ೪೮ ದಿನಗಳ ಮಂಡಲ ಪೂಜೆಯಲ್ಲೂ ಶ್ರೀಗಳು ಭಾಗಿಯಾಗಿದ್ದರು ಎಂದು ವಿವರಿಸಿದರು.
ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಭೀಮಸೇನಾಚಾರ್ಯ ಪಾಂಡುರAಗಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಿಗೆ ಮಾರ್ಗದರ್ಶನದಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಎಸ್.ಬಿ.ಸತ್ಯನಾರಾಯಣ ಗೌರವಾಧ್ಯಕ್ಷರಾಗಿದ್ದು, ಕೆ.ರಾಘವೇಂದ್ರ ರಾವ್ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.
ಸ್ವಾಗತ ಸಮಿತಿ ಉಪಾಧ್ಯಕ್ಷ ನರಸಿಂಹ ಆಲೂರ, ಕಾರ್ಯದರ್ಶಿ ಎಸ್.ಕೆ.ಕುಲಕರ್ಣಿ, ನಾರಾಯಣ ದೇಸಾಯಿ, ಶ್ರೀಹರಿ ಪಾಟೀಲ, ಗೌರವ ಕಾರ್ಯದರ್ಶಿ ಪವನ ಸೀಮಿಕೇರಿ, ಸಹಕಾರ್ಯದರ್ಶಿ ಅನಂತ ಮಳಗಿ, ಅನಂತ ಬೆಳ್ಳುಬ್ಬಿ ಇತರರು ಇದ್ದರು.