ಚಾಮರಾಜನಗರ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಡಾ.ಎಂ.ಆರ್.ರವಿ ಅವರ ಅಧ್ಯಕ್ಷತೆಯಲ್ಲಿ ಜಿ್ಳಲ್ಲೆಯ ವಿವಿಧ ದೇವಸ್ಥಾನಗಳು, ಚರ್ಚ್, ಮಸೀದಿ ಮುಖ್ಯಸ್ಥರ ಸಭೆ ನಡೆಯಿತು. ಜೂ. 8ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯುತ್ತಿರುವ ಹಿನ್ನೆಲೆ ಕರೊನಾ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಲಾಯಿತು.