ಜಿಲ್ಲೆ

ಜೂ. 16 ರಿಂದ 30ರವರೆಗೆ ಜಾಗೃತಿ ಶಿಬಿರ

ಚಾಮರಾಜನಗರ: ಧರ್ತಿ ಆಬಾ ಜನ ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಬೇಕಾಗುವ ದಾಖಲಾತಿಗಳನ್ನು ಒದಗಿಸುವುದು ಮತ್ತು ಯೋಜನೆ ಕುರಿತು ಅರಿವು ಮೂಡಿಸುವ ಸಲುವಾಗಿ ಧರ್ತಿ ಆಬಾ ಅಭಿಯಾನ ಜಾಗೃತಿ ಮತ್ತು ಸೌಲಭ್ಯ ಕುರಿತ ಶಿಬಿರ ಅಭಿಯಾನವನ್ನು ಜಿಲ್ಲೆಯಾದ್ಯಂತ ಜೂ.16 ರಿಂದ 30ರವರೆಗೆ ಆಯೋಜಿಸಲಾಗಿದೆ.

ಧರ್ತಿ ಆಬಾ ಅಭಿಯಾನ ಜಾಗೃತಿ ಮತ್ತು ಸೌಲಭ್ಯಗಳ ಕುರಿತ ಶಿಬಿರವು ಜೂ.16 ರಿಂದ 27ರವರೆಗೆ ನಿಗದಿಯಾಗಿದೆ. ಜೂ.16ರಂದು ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮ ಪಂಚಾಯಿತಿಯ ಮದ್ದೂರು ಕಾಲನಿಯ ಬುಡಕಟ್ಟು ಆಶ್ರಮ ಶಾಲೆ, ಜೂ.17ರಂದು ಚಾಮರಾಜನಗರ ತಾಲೂಕು ಕೆಂಪನಪುರ ಗ್ರಾಮ ಪಂಚಾಯಿತಿಯ ಕಣ್ಣೇಗಾಲ ಗ್ರಾಮದ ಮಾರಮ್ಮನ ದೇವಸ್ಥಾನ, ಜೂ. 18ರಂದು ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮ ಪಂಚಾಯಿತಿಯ ತೊಂಡವಾಡಿ ಗ್ರಾಮದ ನಾಯಕರ ಬೀದಿ ಚಾವಡಿ, ಜೂ.19ರಂದು ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮ ಪಂಚಾಯಿತಿಯ ಯಾನಗಹಳ್ಳಿಯ ವಾಲ್ಮೀಕಿ ಭವನ, ಜೂ.19 ಮತ್ತು 20ರಂದು ಯಳಂದೂರು ತಾಲೂಕಿನ ಅಗರ ಗ್ರಾಮದ ಹಿಂಡಿಮಾರಮ್ಮನ ದೇವಸ್ಥಾನದ ಆವರಣ, ಜೂ.20ರಂದು ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮ ಪಂಚಾಯಿತಿಯ ಸೋಮನಪುರ ಗ್ರಾಮದ ಅಂಗನವಾಡಿ ಕಟ್ಟಡ, ಜೂ. 21ರಂದು ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿಯ ಡಿ. ಕಂದಹಳ್ಳಿ ಗ್ರಾಮದ ನಾಯಕರ ಬೀದಿ ಚಾವಡಿ, ಜೂನ್ 23 ಮತ್ತು 24ರಂದು ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ಮೇಲ್ ಮಾಳ ಗ್ರಾಮಕ್ಕೆ ಸಂಬಂಧಿಸಿದಂತೆ ಮುರಟಿಪಾಳ್ಯ ಬುಡಕಟ್ಟು ಆಶ್ರಮ ಶಾಲೆ, ಜೂ. 25 ಮತ್ತು 26ರಂದು ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಗ್ರಾಮಕ್ಕೆ ಸಂಬಂಧಿಸಿದಂತೆ ಯರಕನಗದ್ದೆ ಕಾಲೋನಿಯ ಸೋಲಿಗರ ಭವನ ಹಾಗೂ ಬಂಗ್ಲೆ ಪೋಡುವಿನ ವಾಲ್ಮೀಕಿ ಭವನ, ಜೂ26 ಮತ್ತು 27ರಂದು ಕೊಳ್ಳೇಗಾಲ ತಾಲೂಕಿನ ಪಾಳ್ಯಾದ ಗ್ರಾಮ ಪಂಚಾಯಿತಿ ಆವರಣ, ಜೂನ್ 27ರಂದು ಚಾಮರಾಜನಗರ ತಾಲೂಕಿನ ಬೇಡಗುಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಕಾಡಿಗೆರೆಯ ಟಿವಿಎಸ್ ಕಾಫಿ ಎಸ್ಟೇಟ್ ನಲ್ಲಿ ಶಿಬಿರಗಳು ನಡೆಯಲಿವೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.