ಬಳ್ಳಾರಿ : ಇಲ್ಲಿನ ಅಲ್ಲಂ ಭವನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಜುಲೈ 06 ಮತ್ತು 07 ರಂದು ಡಿಜೈರ್ ಫೆಸ್ಟ್ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಮಹಿಳಾ ಉದ್ದಿಮೆಗಳು ಭಾಗವಹಿಸಲಿದ್ದಾರೆ. ಈ ಫೆಸ್ಟ್‌ನಲ್ಲಿ ಕೊಲ್ಲಾಪುರಿ ದೇವಿಯ ಬೆಳ್ಳಿ ಫ್ರೇಮ್ ಫೋಟೋ ಮತ್ತು ಅಭರಣಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಕೊಯಮತ್ತೊರಿನ ಕೀರ್ತಿ ಲಾಲ್ ಡೈಮೆಂಡ್ಸ್ ಗಳನ್ನು ಮಾರಾಟ ಮಾಡಲಾಗುವುದು. ಮಾರಾಟದಲ್ಲಿ ಶೇ. 15% ರಿಯಾಯತಿ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಕೊಲ್ಲಾಪುರಿಯ ಮಿಸಾಲ್ ಪಾವ, ಸಾಬುದಾನ ವಡ, ಮೋದಕ, ಶ್ರೀಖಂಡ, ಬಕರವಾದ, ಬಾಡಂಗ, ಪಾನಿಪುರಿ ಹಾಗೂ ಪಾವ ಬಾಜಿ ಅಡುಗೆಯ ತಿನಿಸುಗಳನ್ನು ತಯಾರಿಸಲಾಗುವುದು. ರುಚಿ ಸವಿಯವವರು ಹಣ ಪಾವತಿಸಿ ಸೇವಿಸಬಹುದು.
ಜುಲೈ 6 ಶನಿವಾರದಂದು ಸಾಯಂಕಾಲ ನಾಲ್ಕು ಗಂಟೆಗೆ ಜೂನಿಯರ್ ಮಾಸ್ಟರ್ ಚೆಫ್ ಸ್ಪರ್ಧೆ ನಡೆಸುವುದು. ವಿಜೇತರಾದವರಿಗೆ ಮೊದಲ ಬಹುಮಾನ ಪ್ಯಾನ್‌ಸೋನಿಕ್ ವ್ಯಾಕ್ಯೂಂ ಕ್ಲೀನರ್, ಎರಡನೇ ಬಹುಮಾನ ಎಲೆಕ್ಟಿಕಲ್ ರೈಸ್ ಕುಕ್ಕರ್ ನೀಡಲಾಗುವುದು.
ಜುಲೈ 7 ಭಾನುವಾರದಂದು ಮಧ್ಯಾಹ್ನ ಹನ್ನೇರೆಡು ಗಂಟೆಗೆ ಮಾಸ್ಟರ್ ಚೆಫ್ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಾದವರಿಗೆ ಮೊದಲ ಬಹುಮಾನ ಪ್ಯಾನ್‌ಸೋನಿಕ್ ವ್ಯಾಕ್ಯೂಂ ಕ್ಲೀನರ್, ಎರಡನೇ ಬಹುಮಾನ ಎಲೆಕ್ಟಿಕಲ್ ರೈಸ್ ಕುಕ್ಕರ್ ನೀಡಿ ಗೌರವಿಸಲಾಗುವುದು.