ಜಿಲ್ಲೆ

ಜುಲೈ 13ರಂದು ಚಿತ್ರದುರ್ಗ ಮೆಗಾ ಲೋಕ ಅದಾಲತ್

ಚಿತ್ರದುರ್ಗ:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜುಲೈ 13ರಂದು ಮೆಗಾಲೋಕ ಅ ದಾಲತ್ ಏರ್ಪಡಿಸಲಾಗಿದೆ ಎಂದು ಪ್ರಾಧಿಕಾರದ ಜಿಲ್ಲಾಧ್ಯಕ್ಷ,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ ಹೇಳಿದ ರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ 42747 ಪ್ರಕರಣಗಳ ಪೈಕಿ ಕಾನೂನು ಅನುಸಾರ ಅದಾಲತ್‌ನಲ್ಲಿ ರಾಜೀ ಸಂಧಾನಕ್ಕೆ ಒಳಪಡಿಸಬಹುದಾದ 1804 ಪ್ರಕರಣಗಳನ್ನು ಸದ್ಯಕ್ಕೆ ಗುರುತಿಸಲಾಗಿದೆ. ಹೀಗೆ ಗುರುತಿಸಿರುವ ಪ್ರಕರಣಗಳಲ್ಲಿ 46 ಇತ್ಯರ್ಥಕ್ಕೆ ಸಜ್ಜಾಗಿವೆ.
ಈ ಹಿಂದೆ ಜಿಲ್ಲೆಯಲ್ಲಿ ನಡೆದ ಅದಾಲತ್‌ನಲ್ಲಿ 3772 ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ 113399 ಪ್ರಕರಣಗಳ ಸಹಿತ 118520 ಪ್ರಕರಣಗಳನ್ನು ಉಭಯ ಕಕ್ಷಿದಾರರು ಹಾಗೂ ವಕೀಲರ ಸಹಕಾರದೊಂದಿಗೆ ಇತ್ಯರ್ಥ ಪಡಿಸಲಾಗಿದೆ. ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿ ಸಿದ್ದ 9 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ ಎಂದರು.
ಸುಪ್ರೀಂಕೋರ್ಟ್ ವಿಶೇಷ ಲೋಕ ಅದಾಲತ್
ಸುಪ್ರೀಂಕೋರ್ಟ್ ವಿಶೇಷ ಲೋಕ ಅದಾಲತ್ ಜುಲೈ 29ರಿಂದ ಆಗಸ್ಟ್ 3ರವರೆಗೆ ನಡೆಯಲಿದೆ. ಇದಕ್ಕಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿರುವ 606 ಪ್ರಕರಣಗಳ ಪೈಕಿ ಚಿತ್ರದುರ್ಗ ಜಿಲ್ಲೆಯ 19 ಪ್ರಕರಣಗಳು ಸೇರಿವೆ. ಈ ವಿಶೇಷ ಅದಾಲತ್ ನಡೆಯುವ ಅವಧಿ ಜಿಲ್ಲೆಯ ಜಿಲ್ಲೆ,ತಾಲೂಕು ಕೋರ್ಟ್‌ಗಳು ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಪ್ರಕರಣಗಳ ಉಭಯ ಕಕ್ಷಿದಾರರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ರಾಜೀಸಂಧಾನಕ್ಕೆ ಒಪ್ಪಿಸಿ,ಇತ್ಯರ್ಥಕ್ಕೆ ಸುಪ್ರೀಂಕೋರ್ಟಿಗೆ ಶಿಫಾರಸು ಮಾಡಲಾಗುವುದು ಎಂದರು.
ಜಿಲ್ಲಾಮಟ್ಟದ ಲೋಕ ಅದಾಲತ್‌ಗೆ ಸಂಬಂಧಿಸಿದಂತೆ dlsachiradurga2@gmail.com,ಪ್ರಾಧಿಕಾರ ದ ಕಾರ‌್ಯದರ್ಶಿ ಮೊಬೈಲ್ ಸಂಖ್ಯೆ 9141193935/08194222322ನ್ನು ಸಂಪರ್ಕಿಸಬಹುದು ಅಥವಾ ಪ್ರಾಧಿಕಾರ ಕಾರ‌್ಯದರ್ಶಿ ಅವರ ಕಚೇರಿಗೆ ಖುದ್ದು ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ‌್ಯದರ್ಶಿ ಎಂ.ವಿಜಯ್ ಇದ್ದರು.