ಜಿಲ್ಲೆ

ಜು.೨ ರಂದು ಪ್ರೋ.ಎಚ್ ಲಿಂಗಪ್ಪ ಅವರ ಕೃತಿ ಲೋಕಾರ್ಪಣೆ

ಬಾಗಲಕೋಟೆ: ಶ್ರೀ ಶಿವಶರಣ ಮಾದರ ಚನ್ನಯ್ಯ ಸೇವಾ ಸಮೀತಿ ವತಿಯಿಂದ ಪ್ರೋ.ಎಚ್ ಲಿಂಗಪ್ಪ‌ಚಿತ್ರದುರ್ಗ ಅವರು ರಚಿಸಿರುವ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಜು.೨ ರಂದು ನಡೆಯಲಿದೆ ಎಂದು ಶ್ರೀಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ಸಂಚಾಲಕ ಶಿವಾನಂದ ಟವಳಿ ಹೇಳಿದರು.

ಅವರು ರವಿವಾರ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಪ್ರೋ.ಎಚ್‌. ಲಿಂಗಪ್ಪ ಅವರು ರಚಿಸಿರುವ ಆದಿಮರ ಚರಿತ್ರೆ ಮತ್ತು ಎಂಟು ದಲಿತ ಶರಣರ ಶರಣೆ ವಚನಕಾರರ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರು ಉದ್ಘಾಟಿಸಲಿದ್ದಾರೆ,ಚಿತ್ರದುರ್ಗದ ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಸಾನಿಧ್ಯವಹಿಸಲಿದ್ದಾರೆ. ಮಾಜಿ ಶಾಸಕ, ಬವಿವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಪಿ.ಸಿ‌ಗದ್ದಿಗೌಡರ, ಮಾಜಿ ಸಚಿವ ಎಸ್.ಆರ್.ಪಾಟೀಲ , ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಸಭಾಪತಿ ಜಿ.ಎನ್‌.ಪಾಟೀಲ ಬೆಂಗಳೂರಿನ ಸಿವಿಜಿ ಪಬ್ಲಿಕೇಷನ್ ನ ಪ್ರಕಾಶಕರಾದ ಡಾ.ಚನ್ನವೀರಗೌಡ, ನಗರಸಭೆ ಸಭಾಪತಿ ಯಲ್ಲಪ್ಪ ಯಂಡಿಗೇರಿ ನಾರಾಯಣಿ,ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ ಗೌರವಾಧ್ಯಕ್ಷ ಯಲ್ಲಪ್ಒ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.ಜಿಲ್ಲೆಯ ಎಲ್ಲ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ‌ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮುತ್ತಣ್ಣ ಬೆಣ್ಣೂರ, ಹಣಮಂತ ಚಿಮ್ಮಲಗಿ, ಶಿವಾನಂದ ಬಿಸನಾಳ, ಸಿದ್ದು ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.