ಬಾಗಲಕೋಟೆ: ತಾಲೂಕಿನ ಮುತ್ತತ್ತಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಜು.೧೯ ರಿಂದ ಒಂದು ತಿಂಗಳ ಕಾಲ ಮೌನಾನುಷ್ಠಾನ ಕೈಗೊಳ್ಳಲಿದ್ದಾರೆ.
ಉತ್ತಮ ಮಳೆ, ಬೆಳೆಗೆ ಪ್ರಾರ್ಥಿಸಿ ರೈತರು ಹಾಗೂ ಜನ ಸುಖಿಗಳಾಗಿರಲಿ ಎಂಬ ಸದಾಶಯ ಸೇರಿದಂತೆ ಲೋಕ ಕಲ್ಯಾಣಾರ್ಥವಾಗಿ ತಾವು ಒಂದು ತಿಂಗಳ ಕಾಲ ಶ್ರೀಮಠದಲ್ಲಿ ಮೌನ ಅನುಷ್ಠಾನ ಕೈಗೊಳ್ಳುತ್ತಿದ್ದು, ಅಽಕ ಮಾಸದಲ್ಲಿ ವಿಶೇಷವಾಗಿ ಈ ತಪಸ್ಸು ಮಾಡುತ್ತಿದ್ದಾರೆ. ಜ.೧೯ ರಿಂದ ಆ.೧೭ ರ ವೆರೆಗೆ ತಾವು ಮೌನ ಅನುಷ್ಠಾನ ಕೈಗೊಂಡಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.