ಬಾಗಲಕೋಟೆ: ಬಾಗಲಕೋಟೆ ಯೂನಿಯನ್ ಆಫ್ ಮರ್ಚಂಟ್ಸ್ ಆ್ಯಂಡ್ ಎಂಟರ್-ೆÊನರ್ಸ್ ಅಸೋಸಿಯೇಶನ್ ಉದ್ಘಾಟನಾ ಸಮಾರಂಭ ಜು. ೧೩ ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಡೆಯಲಿದೆ ಎಂದು ಅಧ್ಯಕ್ಷ ರವಿ ಕುಮಟಗಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಚರಂತಿಮಠದ ಪ್ರಭು ಸ್ವಾಮೀಜಿ, -Àಂಡರಾಪುರದ ಪ್ರಭಾಕಾರ ದಾದಾ ಭೋದಲೆ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮೆನ್ ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದಾರೆ. ವಿಶೇಷÀ ಅತಿಥಿಗಳಾಗಿ ಟ್ರುಆ ಬಯೋ ಸಂಸ್ಥಾಪಕÀ ವಿಜಯ್ ನಿರಾಣಿ, ಶಾಸಕ ಎಚ್.ವೈ. ಮೇಟಿ ಆಗಮಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡರ, ನಾರಾಯಣಸಾ ಬಾಂಢಗೆ, ವಿ.ಪ. ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷÀ ಪ್ರಕಾಶ್ ತಪಶೆಟ್ಟಿ, ಹೊಳೆ ಹುಚ್ಚೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷÀ ಹೊಳೆಬಸು ಶೆಟ್ಟರ, ಜಿಲ್ಲಾಽಕಾರಿ ಸಂಗಪ್ಪ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ್ ರೆಡ್ಡಿ, ಬಿಟಿಡಿಎ ಮುಖ್ಯ ಅಭಿಯಂತರ ಬಸವರಾಜ್ ಡಿ., ನಗರಸಭಾ ಆಯುಕ್ತ ವಾಸನ್ನ ಆರ್., ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಬಿ. ಸೌಂಶಿಮಠ ಆಗಮಿಸಲಿದ್ದಾರೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿಗಳಾದ ವಿರೂಪಾಕ್ಷ ಅಮೃತಕರ, ಮುಳಗಡೆಯಾದ ಬಳಿಕ ವ್ಯಾಪಾರ ಕ್ಷಿಣಿಸಿದೆ. ಬಾಗಲಕೋಟೆ ನಗರದಲ್ಲಿ ವ್ಯಾಪಾರದ ಗತ ವೈಭವವನ್ನು ತರಲು ಪ್ರಯತ್ನಿಸಲಾಗುವುದು. ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ ಬೆಳವಣಿಗೆ ನಮ್ಮ ಉದ್ದೇಶವಾಗಿದೆ ಎಂದರು.
ಬಾಗಲಕೋಟೆ ಜನರ ಜೀವನ ಮಟ್ಟವನ್ನು ಸುಧಾರಿಸುವುದು, ತಂತ್ರಜ್ಞಾನಕ್ಕೆ ತಕ್ಕಂತೆ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು, ಬಾಗಲಕೋಟೆ ಮಾರುಕಟ್ಟೆ ಮಾದರಿಯನ್ನಾಗಿ ಮಾಡುವುದು. ಹೀಗಾಗಿ ಬಾಗಲಕೋಟೆಯ ನವನಗರದಲ್ಲಿ ಬೃಹತ್ ಮಾರುಕಟ್ಟೆಯನ್ನು ಮಾಡಲು ಶಾಸಕರು ಮುತವರ್ಜಿ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಪದಾಽಕಾರಿಗಳಾದ ರಾಮಕಿಶನ ಮುಂದಡಾ, ಶ್ರೀನಿವಾಸ ಬಳ್ಳಾರಿ, ಬಾಳಪ್ಪ ಉಳ್ಳಾಗಡ್ಡಿ, ನಾಗರಾಜ ಕುಪ್ಪಸ್ತ,ರಮೇಶ ಕಂದಕೂರ, ಪುಕರಾಜ ಬೇತಾಳ, ಶಂಕರ ತಪಶೆಟ್ಟಿ ಇದ್ದರು.