ಅಸೋಸಿಯೇಷನ್ ಸಹ ಸಂಚಾಲಕ ಶಹಬುದ್ದೀನ್  
ಜಿಲ್ಲೆ

ಜು. ೧೧ರಿಂದ ರಾಜ್ಯ ಮಟ್ಟದ ಕೇರಂ ಪಂದ್ಯಾವಳಿ

ಚಿಕ್ಕಮಗಳೂರು: ಇಲ್ಲಿನ ಕೆಎ೧೮ ಕಾಫಿ ಸಿಟಿ ಕೇರಂ ಅಸೋಸಿಯೇಷನ್ ವತಿಯಿಂದ ಜು. ೧೧ರಿಂದ ೧೩ರವರೆಗೆ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ ಕೇರಂ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಸಹ ಸಂಚಾಲಕ ಶಹಬುದ್ದೀನ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಈ ಕೇರಂ ಟೂರ್ನಮೆಂಟ್ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ನಡೆಯುತ್ತಿದೆ. ರಾಜ್ಯಮಟ್ಟದ ಹಾಗೂ ರಾಷ್ಟçಮಟ್ಟದ ಆಟಗಾರರು ಭಾಗವಹಿಸುತ್ತಿದ್ದಾರೆ ಎಂದರು.

ಎರಡು ಬಾರಿ ವರ್ಲ್ಡ್ ಚಾಂಪಿಯನ್ ಆಗಿರುವ ಆರ್.ಎಂ ಶಂಕರ್, ಒಂದು ಬಾರಿ ರಾಷ್ಟಿçÃಯ ಚಾಂಪಿಯನ್ ಆಗಿದ್ದ ಜಹೀರ್ ಪಾಷ, ರಾಜ್ಯ ಮಟ್ಟದ ಆಟಗಾರ ಅಪ್ಪು, ಚಿಕ್ಕಮಗಳೂರಿನ ಶ್ರೇಷ್ಟ ಆಟಗಾರ ನಗರಸಭೆ ಮಂಜಯ್ಯ ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

ಜು. ೭ರವರೆಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ನಗದು ಬಹುಮಾನ ಮೆನ್ಸ್ ಸಿಂಗಲ್-ಪ್ರಥಮ ೧೦ ಸಾವಿರ, ದ್ವಿತೀಯ ೫ ಸಾವಿರ, ತೃತೀಯ ೩ ಸಾವಿರ ಹಾಗೂ ಟ್ರೋಫಿ, ಮೆನ್ಸ್ ಡಬಲ್ ಪ್ರಥಮ ೨೦ ಸಾವಿರ, ದ್ವಿತೀಯ ೧೦ ಸಾವಿರ, ತೃತೀಯ ೫ ಸಾವಿರ ಮತ್ತು ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.

ವುಮೆನ್ಸ್ ಡಬಲ್-ಪ್ರಥಮ ೫ ಸಾವಿರ, ದ್ವಿತೀಯ ೩ ಸಾವಿರ, ತೃತೀಯ ೧೫೦೦ ರೂ. ಹಾಗೂ ಟ್ರೋಫಿ. ೧೫ ವರ್ಷ ಮೇಲ್ಪಟ್ಟ ಮೆನ್ಸ್ ವೆಟರನ್ಸ್-ಪ್ರಥಮ ೪ ಸಾವಿರ, ದ್ವಿತೀಯ ೨ ಸಾವಿರ, ತೃತೀಯ ೧ ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಈ ಟೂರ್ನಮೆಂಟ್‌ನಲ್ಲಿ ಸುಮಾರ್ ೩೭೦ ಜನ ಭಾಗವಹಿಸುವ ನಿರೀಕ್ಷೆ ಇದೆ. ಪ್ರವೇಶ ಶುಲ್ಕ ಸಿಂಗಲ್ಸ್ಗೆ ೫೦೦ ರೂ. ಹಾಗೂ ಡಬಲ್ಸ್ ಗೆ ಒಂದು ಸಾವಿರ ರೂ. ನಿಗದಿಪಡಿಸಲಾಗಿದೆ. ಸಾರ್ವಜನಿಕರು ಈ ಟೂರ್ನಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟೂರ್ನಮೆಂಟ್ ಆಯೋಜಕ ಹಾಗೂ ಸಂಚಾಲಕ ಫಯಾಜ್ ಅಹಮದ್, ಸದಸ್ಯರಾದ ಮಂಜುನಾಥ್ ಸಿಂಗ್, ವಿಜಯ್, ಪ್ರತಾಪ್, ಮಹೇಶ್ ಇದ್ದರು.