ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರಕ್ಕೆ ಪ್ರೊ. ಗುರಪ್ಪ ಹಾಗೂ ಡಿ.ಹನುಮಕ್ಕ ಅವರು ಆಯ್ಕೆ ಆಗಿದ್ದಾರೆ ಎಂದು ರಂಗತೋರಣ ಸಂಸ್ಥೆ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹೇಳಿದರು.
ನಗರದ ಖಾಸಗಿ ಹೊಟೇಲ್ ಸಾಂಗಣದಲ್ಲಿ ರಂಗತೋರಣ ಸಂಸ್ಥೆಯಿಂದ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿವರ್ಷ ಸಂಸ್ಥೆಯಿಂದ ನೀಡಲಾಗುತ್ತಿದ್ದು, ಈ ತಿಂಗಳು ಜು. 28 ರಂದು ಇಲ್ಲಿ ನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು. ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಾಗಿ ಆರಂಭಗೊಂಡ ಶ್ರೀಗಜಾನನ ಯುವ ಮಂಡಳಿ ತನ್ನ 35 ವರ್ಷಗಳ ನಿರಂತರ ಚಟುವಟಿಕೆಗಳಿಂದ ಶೇಷಗಿರಿ ಕಲಾ ತಂಡ ಎಂದೇ ಹೆಸರಾಗಿದೆ. ಉತ್ತಮ ಸಾಮಾಜಿಕ ಚಿಂತನೆಯ ಹೊಸ ಅಲೆಯ ನಾಟಕಗಳನ್ನು ಹೆಸರಾಂತ ನಿರ್ದೇಶಕರಿಂದ ತಯಾರಿಸಿಕೊಂಡು ರಾಜ್ಯಾದ್ಯಂತ ಪ್ರದರ್ಶಿಸುತ್ತ ಬರುತ್ತಿರುವ ಶೇಷಗಿರಿ ಕಲಾ ತಂಡದ ಗ್ರಾಮೀಣ ಮಟ್ಟದಲ್ಲಿ ಅತ್ಯಾಧನಿಕ ಸೌಲಭ್ಯವುಳ್ಳ ರಂಗಮಂದಿರ ಹೊಂದಿರುವುದು ಪ್ರಸಂಶಿನೀಯ. ಈ ತಂಡದ ಎಲ್ಲ ಕಾರ್ಯ ಚಟುವಟಿಕೆಗಳ ಹಿಂದಿರುವ ಶಕ್ತಿ ಪ್ರೊ. ಗುರಪ್ಪನವರು ಎಂದರು.
ಹನುಮಕಕ್ಕ ಓದಿದ್ದು ಕೇವಲ 9ನೇ ತರಗತಿ. ನಾಗಮಂಡಲ, ಸ್ಮಶಾನ ಕುರುಕ್ಷೇತ್ರ, ಚಾಳೇಶ, ಸೊನ್ನಲಿಗೆ ಸಿದ್ಧರಾಮ, ಪಳೆಯಂಕರು, ಮನ್ವಂತರ, ಗಾಂ ಬಂದ, ಮೌನ ಕೋಗಿಲೆ ಮೊದಲಾದ ಚರಿತ್ರಾರ್ಹ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.