ಜಿಲ್ಲೆ

ಜು.24 ರಂದು ಅನುಭಾವ ಪರಂಪರೆ ವಿಚಾರ ಸಂಕಿರಣ

ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜು ಮತ್ತು ರಂಗವಾಹಿನಿ ಇವರ ಸಹಯೋಗದೊಂದಿಗೆ ಅನುಭಾವ ಪರಂಪರೆ-ತಾತ್ವಿಕ ಜಿಜ್ಞಾಸೆ (ಬಸವಣ್ಣ, ಕನಕದಾಸ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿಯರ ಕುರಿತ ತೌಲನಿಕ ಅಧ್ಯಯನ) ಒಂದು ದಿನದ ವಿಚಾರ ಸಂಕಿರಣವನ್ನು ಜು.24ರಂದು ಬೆಳಗ್ಗೆ 10 ಗಂಟೆಗೆ ನಗರದ ಜೆ.ಎಸ್.ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಉದ್ಘಾಟನೆ ನೆರವೇರಿಸುವರು. ಸಂಸ್ಕೃತಿ ಚಿಂತಕ ಪ್ರೊ. ಬಿ.ಎಸ್.ಜಯದೇವ ಅಧ್ಯಕ್ಷತೆ ವಹಿಸುವರು. ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಮಾತನಾಡುವರು. ಜೆ.ಎಸ್.ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ನಂಜುಂಡಯ್ಯ ಉಪಸ್ಥಿತರಿರುವರು.

ಮಧ್ಯಕಾಲೀನ ಕರ್ನಾಟಕದ ಅನುಭಾವ ಪರಂಪರೆ ವಿಷಯ ಕುರಿತು ಪ್ರೊ. ಮೊರಬದ ಮಲ್ಲಿಕಾರ್ಜುನ, ಕನಕದಾಸ, ಬಸವಣ್ಣ ಮತ್ತು ಮಲೆಮಹದೇಶ್ವರ ಅವೈದಿಕ ಚಿಂತನೆ ವಿಷಯ ಕುರಿತು ಡಾ. ಉಷಾರಾಣಿ, ಕನಕದಾಸ, ಬಸವಣ್ಣ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ-ಸಾಮಾಜಿಕ ಸಂಘರ್ಷ ವಿಷಯ ಕುರಿತು ಡಾ. ರಾಜಪ್ಪ ದಳವಾಯಿ, ಕನಕದಾಸ, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ-ಅನುಭಾವ ಚಿಂತನೆ ವಿಷಯ ಕುರಿತು ಡಾ. ಕೆ.ಎನ್. ಗಿರೀಶ್, ಮಲೆಮಹದೇಶ್ವರ ಮತ್ತು ಮಂಟೇಸ್ವಾಮಿ-ಸಾಂಸ್ಕೃತಿಕ ನಾಯಕರು ವಿಷಯ ಕುರಿತು ಮಹದೇವ ಶಂಕನಪುರ ಅವರು ವಿಷಯ ಮಂಡನೆ ಮಾಡುವರು.

ವಿಷಯ ಮಂಡನೆಯ ನಂತರ ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.