ಹಾಸನ: ಇಸ್ರೇಲ್‌ನಲ್ಲಿ ಕೃಷಿ ಪದ್ದತಿ ಮತ್ತು ತಂತ್ರಜ್ಞಾನ ಬಳಕೆ ಬಗ್ಗೆ ಚರ್ಚೆ ನಡೆಸಲು ಇದೇ ತಿಂಗಳು 22ರಿಂದ ಆರು ದಿನಗಳ ಕಾಲ
ಪ್ರವಾಸ ಕೈಗೊಂಡಿದ್ದು, ನಂತರ ಓಡನಹಳ್ಳಿ ನಾನೋ ಫುಡ್ ಪಾರ್ಕ್ ಹಾಸನ ಮೆಗಾ ಫುಡ್‌ಪಾರ್ಕ್ ಆಗಿ ಪರಿವರ್ತನೆ ಆಗಲಿದೆ ಎಂದು ಸಿಇಓ ಅಶೋಕ್ ತಿಳಿಸಿದರು.
ರೈತರು ಬೆಳೆದ ಬೆಳೆಗಳನ್ನು ಸುಧೀರ್ಘ ಕಾಲ ರಕ್ಷಿಸಿ ಇಡಲು ಹೈಟೆಕ್ ಹಾರ್ವೆಸ್ಟ್ ಹಬ್ ತಂತ್ರಜ್ಞಾನ ವರ್ಗಾವಣೆ ಬಗ್ಗೆ ಚರ್ಚೆ ಮಾಡಲಾಗುವುದು. ಹಾಸನದಲ್ಲಿ ಸಿಗುವ ತೋಟಗಾರಿಕಾ ಬೆಳೆಗಳ ರೋಗಗಳ ನಿಯಂತ್ರಣ ಮಾಡಲು ಅಲ್ಲಿ ಲಭ್ಯ ಇರುವ ರೋಗ ನಿಯಂತ್ರಣ ಬಗ್ಗೆಯೂ ಚರ್ಚಿಸಲು ನಾನು ಮತ್ತು ನಾಗರಾಜ ಟಿ.ಕೆ. ಅವರು ಜುಲೈ 22 ರಿಂದ ಇಸ್ರೇಲ್ ಪ್ರವಾಸ ಕೈಗೊಳ್ಳುತ್ತಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಮ್ಮ ಸಂಸ್ಥೆಯಿಂದ ಈ ಹಿಂದೆ ಬಿಡುಗಡೆ ಮಾಡಿದ್ದ ತೆಂಗಿನ ಹಾಲು ಮತ್ತು ಕೋವ ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿದೆ, ತೆಂಗು ಮತ್ತು ಕಾಫಿ ಎರಡು ವಾಣಿಜ್ಯ ಬೆಳೆಗಳು ಆಗಿರುವುದರಿಂದ ’ಕೋಕೋ ಕಾಫಿ ಎನ್ನುವ ಬ್ರಾಂಡ್ ಬಗ್ಗೆ ಚರ್ಚೆ ನಡೆಸಿ, ಹೊಸ ಉತ್ಪನದ ಬಗ್ಗೆ ಯೋಜಿಸಲಾಗಿದೆ ಎಂದರು.
್ಲ ವಾಣಿಜ್ಯ ಹೂವುಗಳ ಅರಿವು ಮೂಡಿಸಲು ಸುಮಾರು 10 ತರಹದ ಹೊಸ ಹೂ ತಳಿಗಳನ್ನ ಪರಿಚಯಿಸಲು ನಿರ್ಧರಿಸಲಾಗಿದ್ದು, ಇಸ್ರೇಲ್ ಹಸುಗಳು ಅತಿ ಹೆಚ್ಚು ಹಾಲು ಕೊಡುವ ಕಾರಣ ಅಲ್ಲಿನ ಹಸುಗಳ ಆಹಾರ, ಪದ್ಧತಿ ಪರಿಚಯಿಸಿ ಅದರಿಂದ ಶೇ. 20 ರಷ್ಟು ಹೆಚ್ಚು ಹಾಲು ಬರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.