filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.51731485, 0.13633333);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ಜಿಲ್ಲೆ

ಜು.15 ರಂದು ಚಾ.ನಗರ ಬಂದ್

ಎ.ಎಸ್.ಮಣಿಕಂಠ
*ಆಕ್ಸಿಜನ್ ಸಂತ್ರಸ್ತರ ನ್ಯಾಯಕ್ಕಾಗಿ ಆಗ್ರಹಿಸಿ ಕರೆ 
*ವಿವಿಧ ಸಂಘಟನೆಗಳಿಂದ ಸಂತ್ರಸ್ತ ಕುಟುಂಬಗಳಿಗೆ ಬೆಂಬಲ 
ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮಡಿದವರ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ನ್ಯಾಯಕ್ಕೆ ಆಗ್ರಹಿಸಿ ಜು.15 ಚಾಮರಾಜನಗರ ಬಂದ್ ಗೆ ಕರೆ ನೀಡಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಸಂಘಸಂಸ್ಥೆಗಳು ಮತ್ತು ಆಕ್ಸಿಜನ್ ಸಂತ್ರಸ್ತರ ಸಭೆಯಲ್ಲಿ ಒಕ್ಕೊರಲಿನಿಂದ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.
ಈ ವೇಳೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಇತ್ತೀಚೆಗೆ ಆಕ್ಸಿಜನ್ ಸಂತ್ರಸ್ತರ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ವೇಳೆಯಲ್ಲಿ ಜಿಲ್ಲಾಧಿಕಾರಿಗಳು 8-10 ದಿನಗಳಲ್ಲಿ ಉಸ್ತುವಾರಿ ಸಚಿವರ ಜತೆ ನೇತೃತ್ವದಲ್ಲಿ ಸಭೆ ಕರೆದು ಬೇಡಿಕೆ ಈಡೇರಿಸಲಾಗುವುದು ಎಂದು ಹೇಳಿದ್ದರು. ಆದರೇ ಈವರೆಗೂ ಯಾವುದೇ ಕ್ರಮವಹಿಸಿಲ್ಲ. ಜು.2 ರಂದು ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ನಾವು ಪ್ರತಿರೋಧ ವ್ಯಕ್ತಪಡಿಸಬೇಕಾಗಿದೆ ಎಂದರು.
ಬೆಂಗಳೂರಿನಲ್ಲಿ ನಡೆದ ಆರ್.ಸಿ.ಬಿ ಕಾಲ್ತುಳಿತದಲ್ಲಿ ಸತ್ತವರಿಗೆ ಯಾರು ಪ್ರತಿಭಟನೆ ಮಾಡದಿದ್ದರೂ 25 ಲಕ್ಷ ರೂ, ಪರಿಹಾರ ಕೊಟ್ಟರು. ಮೇಲಾಧಿಕಾರಿಗಳನ್ನು ಕೂಡ ಅಮಾನತು ಮಾಡಿದರು. ಆದರೇ 4 ವರ್ಷಗಳಿಂದ 36 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ, ಉದ್ಯೋಗ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಿಲ್ಲ. ಈ ನಿಟ್ಟಿನಲ್ಲಿ ಜು.15 ರಂದು ಚಾಮರಾಜನಗರ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹೋರಾಟಗಾರ ನಿಜಧ್ವನಿ ಗೋವಿಂದರಾಜು ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತ ಸಂತ್ರಸ್ತರ ವಿಚಾರದಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ನಗರದ ಎಲ್ಲಾ ಸಂಘ-ಸಂಸ್ಥೆಗಳ ಸಹಕಾರವನ್ನು ಪಡೆದುಕೊಂಡು ಜು.15 ರಂದು ಜಿಲ್ಲಾ ಕೇಂದ್ರವನ್ನು ಬಂದ್ ಮಾಡೋಣ ಎಂದರು.
ಅರಕಲವಾಡಿ ನಾಗೇಂದ್ರ ಮಾತನಾಡಿ, ಸರ್ಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತ ಆಕ್ಸಿಜನ್ ಸಂತ್ರಸ್ತರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಈ ಪ್ರಕರಣವನ್ನು ಈವರೆಗೂ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ದುರದೃಷ್ಟಕರವಾಗಿದೆ. ಅನಿವಾರ್ಯವಾಗಿ ಚಾಮರಾಜನಗರ ಬಂದ್ ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಹಿರಿಯ ಹೋರಾಟ ಅಬ್ರಾಹಂ ಡಿಸಿಲ್ವಾ, ರೈತ ಮುಖಂಡ ಹಾಲಿನ ನಾಗರಾಜು, ಕನ್ನಡ ಪರ ಸಂಘಟನೆಯ ನಮ್ಮನೆ ಪ್ರಶಾಂತ್, ಸುರೇಶ್ ವಾಜಪೇಯಿ, ದಸಂಸ ಜಿಲ್ಲಾ ಸಂಚಾಲಕ ದೊಡ್ಡಿಂದವಾಡಿ ಸಿದ್ದರಾಜು, ಬೆಳ್ಳಿಯಪ್ಪ ಮಾತನಾಡಿ, ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಸಂತ್ರಸ್ತರು ಹಾಗೂ ಇತರರು ಹಾಜರಿದ್ದರು.
ಸರ್ಕಾರ ಆಕ್ಸಿಜನ್ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಉದ್ಯೋಗವನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಜು.15 ರಂದು ಚಾ.ನಗರ ಬಂದ್ ಗೆ ಕರೆನೀಡಲಾಗಿದೆ. ಜಿಲ್ಲೆಯ ಪ್ರಜ್ಞಾವಂತರು ನೊಂದ ಕುಟುಂಬಗಳಿಗೆ ಸಹಕಾರ ನೀಡಬೇಕು. 
-ಪುಣಜನೂರು ದೊರೆಸ್ವಾಮಿ, ಪರಿಸರವಾದಿ ಹೋರಾಟಗಾರ, ಚಾಮರಾಜನಗರ 
ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವುದೇ ನಮ್ಮ ಅಜೆಂಡವಾಗಿದೆ. ನಗರದ ಎಲ್ಲಾ ಮಸೀದಿಯ ಗುರುಗಳು ಹಾಗೂ ಜಿಲ್ಲಾ ಮುಸ್ಲಿಂ ಒಕ್ಕೂಟ ಬಂದ್ ಗೇ ಈಗಾಗಲೇ ಸಂಪೂರ್ಣ ಸಹಕಾರ ನೀಡಿದ್ದಾರೆ. 
-ಅಬ್ರಾರ್ ಅಹಮ್ಮದ್, ರಾಜ್ಯ ಕಾರ್ಯದರ್ಶಿ, ಎಸ್ಡಿಪಿಐ, ಚಾಮರಾಜನಗರ