ಚಿತ್ರದುರ್ಗ: ಕೇಂದ್ರಿಯ ಸೈನಿಕ ಮಂಡಳಿಯಿಂದ ಅಂಗವಿಕಲ ಹಾಗೂ ಅನಾಥ ಮಕ್ಕಳ ಅನುದಾನ ನವೀಕರಣಕ್ಕಾಗಿ 2025ರ ಮಾ.31 ರೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ. ಹಿರೇಮಠ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕೇಂದ್ರಿಯ ಸೈನಿಕ ಮಂಡಳಿ ಜಾಲತಾಣ ತಾ ಣ HTTPS:// ONLINE. KSB.GON.IN ಅಥವಾ ಇಲಾಖೆ ಕಚೇರಿ(08182-220925)ಸಂಪರ್ಕಿಸಬಹುದು.