ಜಿಲ್ಲೆ

ಜೀವನದಲ್ಲಿ ಸೋಲು-ಗೆಲುವು ಸಹಜ,ಬಸವಪ್ರಭು ಶ್ರೀ


ಚಿತ್ರದುರ್ಗ: ಜೀವನವೆಂದರೆ ಮುಳ್ಳಿನ ಹಾಸಿಗೆ ಇದ್ದಂತೆ ಎಂದು ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ವಿದ್ಯಾನಗರದಲ್ಲಿ ಸೋಮವಾರ ಏರ್ಪಡಿಸಿದ್ದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನೆ ಕಾರ‌್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು,ಜೀವನ ಅಂದ ಮೇಲೆ ಸನ್ಮಾನ ಅವಮಾನ ಇರುತ್ತದೆ,ಸೋಲು-ಗೆಲವು ಸಹಜ. ಸಂತರು,ಶರಣರು, ಮಹಾಂತರು ಸುಖ-ದುಃಖವನ್ನು ಸಮನಾಗಿ ಸ್ವೀಕರಿಸಿದರು. ಬದುಕಿನಲ್ಲಿ ಬರುವ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದವರು ಬಸವಾದಿ ಶರಣರು.


ಕೆಲವರು ಸಮಸ್ಯೆ ಬಂತೆಂದರೆ ಆತ್ಮಹತ್ಯೆಗೆ ಒಳಗಾಗುತ್ತಾರೆ. ಅದು ಜೀವನ ಅಲ್ಲ. ಧೈರ್ಯ ಇರುವವರಿಗೆ ಬಸವತತ್ವ ಒಲಿಯುತ್ತದೆ. ಸಮಸ್ಯೆಗಳು ಬಂದಾಗ ಮೌನ ವಹಿಸಬೇಕು. ಕಷ್ಟಗಳು ದೇವರ ಪರೀಕ್ಷೆ ಎನ್ನಬೇಕು. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸ ಬೇಕೆಂದರು.


ಜೆ.ಪರಶುರಾಮ ಮಾತನಾಡಿ,ಭೂಮಿ ಸಮತೋಲನ ತಪ್ಪಿದರೆ ಭೂಕಂಪಗಳು ಸೃಷ್ಟಿಯಾಗುತ್ತವೆ. ದುಃಖ ಬಂದಾಗ ಬುದ್ಧಿ ಮಟ್ಟ ಕುಸಿಯುತ್ತದೆ. ಸುಖ ಬಂದಾಗ ಹಿಗ್ಗುವುದು,ದುಃಖ ಬಂದಾಗ ಕುಗ್ಗುವುದು ಬೇಡ ಎಂದರು.
ಲಿಂಗಸಗೂರು ವಾಲ್ಮೀಕಿ ಗುರುಪೀಠದ ಶ್ರೀ ವರದಾನೇಶ್ವರ ಸ್ವಾಮೀಜಿ ಮಾತನಾಡಿ,ಕಷ್ಟ ಜೀವನವನ್ನು ಕಲಿಸುತ್ತದೆ.ಸಮಾಜಮುಖಿ ಕಾರ‌್ಯಗಳೊಂದಿಗೆ ವಿಚಾರವಂತಿಕೆಯನ್ನು ರೂಢಿಸಿಕೊಳ್ಳ ಬೇಕೆಂದರು. ಸುರೇಶ್‌ಬಾಬು ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ಜಯರಾಮ ರೆಡ್ಡಿ,ಉಪಾಧ್ಯಕ್ಷೆ ಲೀಲಾವತಿಶಿವಮೂರ್ತಿ,ಸದಸ್ಯರಾದ ವನಜಾಕ್ಷಿ,ನಿರಂಜನ,ಸುಲೋಚನಾಶಂಕರ್,ಪ್ರತಿಭಾ ಮಂಜುನಾಥ ಇದ್ದರು. ಜ ಮುರಾ ಕಲಾವಿದರು ಪ್ರಾರ್ಥಿಸಿದರು. ಮಂಜುನಾಥ್ ಸ್ವಾಗತಿಸಿ,ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.
(ಸಿಟಿಡಿ 12 ಮುರುಘಾ)
ಚಿತ್ರದುರ್ಗ ವಿದ್ಯಾನಗರದಲ್ಲಿ ಸೋಮವಾರ ಏರ್ಪಡಿಸಿದ್ದ ನಿತ್ಯಕಲ್ಯಾಣ ಕಾರ‌್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತ ನಾಡಿದರು. ಜೆ.ಪರಶುರಾಮ, ಶ್ರೀ ವರದಾನೇಶ್ವರ ಸ್ವಾಮೀಜಿ,ಜಯರಾಮರೆಡ್ಡಿ,ಲೀಲಾವತಿಶಿವಮೂರ್ತಿ,ವನಜಾಕ್ಷಿ,ನಿರಂಜನ, ಸುಲೋಚನಾ ಶಂಕರ್,ಪ್ರತಿಭಾಮಂಜುನಾಥ ಮತ್ತಿತರರು ಇದ್ದರು.