ಬಾಗಲಕೋಟೆ: ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಬದ್ದತೆ ಅಗತ್ಯವಾಗಿದೆ ಎಂದು ಮಾಜಿ ಶಾಸಕ,ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.
ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಅಖಿಲ ಭಾರತೀಯ ಗ್ರಾಹಕರ ಪಂಚಾಯತ - ಕರ್ನಾಟಕ ಪ್ರಾಂತ,ಬಾಗಲಕೋಟೆ ಜಿಲ್ಲೆ ಹಾಗೂ ಬಿ.ವ್ಹಿ.ವ್ಹಿ.ಸಂಘದ ಎಸ್.ಸಿ.ನಂದಿಮಠ ಕಾನೂನುಮಹಾವಿದ್ಯಾಲಯ ವಿದ್ಯಾಗಿರಿ ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಮಹಾವಿದ್ಯಾಲಯ ವಿದ್ಯಾರ್ಥಿ ಗ್ರಾಹಕ ಕ್ಲಬ್ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜನರಿಗೆ ಹಕ್ಕು ಮತ್ತು ಜವಾಬ್ದಾರಿಗಳ ಅರಿವೂ ಮೂಡಿಸಿ, ರಾಷ್ಟ್ರದ ಭವಿಷ್ಯಕ್ಕಾಗಿ ಪ್ರಬುದ್ಧ ನಾಗರಿಕರನ್ನಾಗಿ ಮಾಡ ಬೇಕಿದೆ.ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆಯನ್ನು ರೂಢಿಸಿಕೊಂಡು ಸರಿಯಾದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪ್ರಾಮಾಣಿಕ ಬದ್ದತೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಕ್ಲಭ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ವಿಜಯಕುಮಾರ ಪಾವಲೆ ,
ಇಂದಿನ ವಿದ್ಯಾರ್ಥಿಗಳೆಗೆ ಪರಿಶ್ರಮ ಅಗತ್ಯವಿದ್ದು ಕಾನೂನಿನ ಹೊಸ ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ನ್ಯಾಯ ಒದಗಿಸಿ ಅವರ ಸಂರಕ್ಷಣೆಯನ್ನು ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾದ ಅಖಿಲ ಭಾರತೀಯ ಗ್ರಾಹಕರ ಪಂಚಾಯತ್- ಕರ್ನಾಟಕ ಪ್ರಾಂತ ಮತ್ತು ಐ.ಟಿ.ತಂತ್ರಾಂಶ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಗಾಯತ್ರಿ ನಾಡಿಗ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಸ್ಮಾರ್ಟ್ ಆಗಿರುವದ ಜೊತೆಗೆ ಎಲ್ಲ ವಿಷಯಗಳ ಅರಿವು ಬಹಳ ಮುಖ್ಯವಾಗಿದ್ದು.ಉತ್ತಮ ಗ್ರಾಹಕರಾಗುವುದರ ಜತೆಗೆ ದೇಶದ ಅಭಿವೃದ್ಧಿ ಕಾಣಬಹುದು.ಇಂದಿನ ವಿದ್ಯಾರ್ಥಿಗಳು ಸಂಶೋಧನೆ, ಅಧ್ಯಯನ ಕಡೆ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಂ.ಪಿ.ಚಂದ್ರಿಕಾ. ಸಂಯೋಜಕರಾದ ಭವಾನಿ ಪಾಟೀಲ, ವಿಜಯಲಕ್ಷ್ಮಿ ಪಸೋಡಿ,ರಂಗನಗೌಡ ದಂಡನ್ನವರ,ಸಿದ್ದನಗೌಡರ ಸೇರಿದಂತೆ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.