ಶ್ರಾವಣ ಮಾಸ ನಿಮಿತ್ತ ಸಂಸ್ಥಾನ ಗವಿಮಠದಲ್ಲಿ ಸೋಮವಾರ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಸಮಾರಂಭದಲ್ಲಿ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಬಸವಂತಪ್ಪ ಲವಾರೆ, ಮಲ್ಲಪ್ಪ ಬರಗಾಲೆ, ಸತೀಶ ಸ್ವಾಮಿ ನೀಲಮಠ, ಓಂಕಾರ ಪಾಟೀಲ ಗಾರಂಪಲ್ಲಿ ಇದ್ದರು. 
ಜಿಲ್ಲೆ

ಜೀವನದಲ್ಲಿ ಧರ್ಮಾಚರಣೆ ಅವಶ್ಯಕ

ರಾಜು ಯಮಕನಮರಡಿ

ಬಸವಕಲ್ಯಾಣ: ಮನುಷ್ಯ ಜೀವನದಲ್ಲಿ ಧರ್ಮಾಚರಣೆ ಅವಶ್ಯಕ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.

ಶ್ರಾವಣ ಮಾಸ ನಿಮಿತ್ತ ಸಂಸ್ಥಾನ ಗವಿಮಠದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ವಿಶೇಷ ಉಪನ್ಯಾಸ ಮಾಲೆ ಸಮಾರಂಭದ ಸಾನ್ನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡಿ, ಮನುಷ್ಯ ಧರ್ಮದ ಮಾರ್ಗದಲ್ಲಿ ನಡೆಯುವುದು ಮುಖ್ಯ. ಮನುಷ್ಯನು ಇಹಲೋಕ ಯಾತ್ರೆಯನ್ನು ಮುಗಿಸಿ ಪರಲೋಕಕ್ಕೆ ತೆರಳುವಾಗ ಅವನ ಜತೆಗೆ ಹೋಗುವಂತಥದ್ದು ಎಂದರೆ ಅವನು ಸಂಪಾದಿಸಿದ ಧರ್ಮವೊಂದೇ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕೃಷಿ ಅಧಿಕಾರಿ ಬಸವಂತಪ್ಪ ಲವಾರೆ ಮಾತನಾಡಿ, ಸಂಸ್ಕಾರದ ಕೊರತೆಯಿಂದಾಗಿ ಕೌಟುಂಬಿಕ ವ್ಯವಸ್ಥೆ ಸಡಿಲಗೊಳ್ಳುತ್ತಿದೆ. ಕುಟುಂಬದಲ್ಲಿ ತಂದೆ-ತಾಯಿಗಳ ಪಾತ್ರ, ಜೀವನದಲ್ಲಿ ಗುರುವಿನ ಮಹತ್ವ ಇಲ್ಲದಂತೆ ಆಗುತ್ತಿದ್ದು, ತಂದೆ-ತಾಯಿಯರಲ್ಲಿ ಸಂಸ್ಕಾರವಿಲ್ಲದೆ ಅನೇಕ ಕುಟುಂಬಗಳು ವಾಮ ಮಾರ್ಗಕ್ಕೆ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಅಪರೇಷನ್ ಸಿಂಧೂರನಲ್ಲಿ ಭಾಗವಹಿಸಿದ ವೀರಯೋಧ ಮಲ್ಲಪ್ಪ ಬರಗಾಲೆ ಅವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಓಂಕಾರ್ ಪಾಟೀಲ ಗಾರಂಪಲ್ಲಿ, ಸತೀಶ ಸ್ವಾಮಿ ನೀಲಮಠ, ವಿಮಲಾಬಾಯಿ ಬಿರಾದಾರ, ಸವಿತಾ ಸ್ವಾಮಿ, ರಾಕೇಶ ಪುರವಂತ, ವಿಜಯಕುಮಾರ ಪಾಟೀಲ ಸುಂಠಾಣ, ಬಾಬುರಾವ ಚಳಕಾಪುರೆ, ಸರಸ್ವತಿ ಬೆಂಬಳ್ಗೆ, ಸಂತೋಷ ಬಿರಾದಾರ, ರುದ್ರಮುನಿ ಹಿರೇಮಠ, ಸಾಗರ ಮಾಲಗರ, ವೀರಶೆಟ್ಟಿ ಪಾಟೀಲ, ಗೊವಿಂದರೆಡ್ಡಿ ಕೊತಂಪಲ್ಲಿ, ವಿಠ್ಠಲ ರಾಯಪ್ಪನೋರ, ರಮೇಶ ತೊಗರಖೇಡೆ, ಇದ್ದರು. ಕಲ್ಪನಾ ಶೀಲವಂತ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಆಲಗೂಡೆ ನಿರೂಪಣೆ ಮಾಡಿದರು. ವಿವೇಕ ವಸ್ತçದ ಪ್ರಾಥನಾ ಗೀತೆ ಹಾಡಿದರು. ಯದಲಾಪೂರ ಭಕ್ತರಿಂದ ಭಜನೆ ನಡೆಯಿತು.