ಬಾಗಲಕೋಟೆ: ಮಕ್ಕಳು ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಳ್ಳಬೇಕು ಅದರ ಹಿಂದೆ ಉತ್ತಮ ಗುರುವನ್ನು ಹೊಂದಿದಾಗ ಮಾತ್ರ ಜೀವನದಲ್ಲಿ ಸಾಧನೆಮಾಡಲು ಸಾಧ್ಯವಾಗುತ್ತೆ ಎಂದು ಅಂಬಿಗ ಸಮಾಜದ ತಾಲೂಕಾಧ್ಯಕ್ಷ ಚಂದ್ರಶೇಖರ ಕೋಲ್ಕಾರ ಹೇಳಿದರು.
ನವನಗರದ ಸೆಕ್ಟರ ನಂಬರ 8 ರಲ್ಲಿರುವ ಅಂಬಿಗ ಚೌಡಯ್ಯಭವನದಲ್ಲಿ ತಾಲೂಕಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳ ಪ್ರತಿಭೆ ಹೊರಬರಲು ಪಾಲಕರ ಪಾತ್ರ ಕೂಡಾ ಮುಖ್ಯವಾಗಿರುತ್ತೆದೆ ಮಕ್ಕಳು ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕಾದರೆ ಉತ್ತಮ ಅಧ್ಯಯನ ಮುಖ್ಯವಾಗಿದೆ, ಸಮಾಜ ಬಾಂದವರ ಸಂಭಂದಗಳನ್ನು ಬೆಳಸಿಕೊಳ್ಳಬೇಕು ಎಂದರು.
ನೌಕರವೃಂದ ಸಮಾಜದ ಅಭಿವೃದ್ಧಿಗಾಗಿ ಬೆನ್ನುಲುಬುವಾಗಿ ನಿಲ್ಲಬೇಕು ನೌಕರವೃಂದ ಹಾಗೂ ಸಮಾಜವದವರು ಒಂದೆ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಬೇಕು ತಾಲೂಕಿನಲ್ಲಿರುವ ಅಂಬಿಗರು ಸಾಕಷ್ಟು ಸಂಖ್ಯೆಯಲ್ಲಿ ಇದ್ದು ಎಲ್ಲರೋ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಶಿಕ್ಷಣದಿಂದ ಮಾತ್ರ ಕುಟುಂಬ ಮತ್ತು ಸಮಾಜ ಎರಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತೆದೆ ಮಕ್ಕಳಲ್ಲಿ ಇಂತಹ ಕಾರ್ಯಕ್ರಮಗಳು ಉತ್ತೇಜನ ನೀಡುತ್ತೆವೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ವೈ ಸಿ ವಾಲಿಕಾರ ಸರ್ಕಾರಿಯಿಂದ ವಯೋನಿವೃತ್ತಿ ಹೊಂದಿದ ನೌಕರರು ನೌಕರಿ ಜವಾಬ್ದಾರಿ ಮುಗಿದಿದ್ದು ಮುಂದೆ ನಿಮ್ಮ ಸೇವೆ ಸಮಾಜದ ಅಭಿವೃದ್ಧಿಗೆ ಮಿಸಲಿಡಬೇಕು ಸಮಾಜದ ಸಂಘಟನೆಯತ್ತ ಗಮನಹರಿಸಬೇಕು ಎಂದು ಹೇಳಿದರು.
ಸರ್ಕಾರಿ ನೌಕರಿಯಿಂದ ವಯೋ ನಿವೃತ್ತಿ ಹೊಂದಿದ ನೌಕರರಿಗೂ ಸಹ ಆತ್ಮೀಯವಾಗಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ತಾಲೂಕಾಧ್ಯಕ್ಷ ರಾಮಣ್ಣ ರಾಮೋಡಗಿ ಬಿ ಎಚ್ ಭೋಯಿ ಪಿ ಎಸ್ ಬಿದರಿ ಮುತ್ತುರಾಜ ಜಂಬಗಿ ಶ್ರೀಕಾಂತ ಕಟ್ಟಿಮನಿ ವಿರೇಶ ಜೇವರಗಿ ಬಾಲಪ್ಪ ಅಂಬಿಗೇರ ನರಸಪ್ಪ ಅಂಬಿಗೇರ ಶಂಕರ ಅಂಬಿಗೇರ ಬಾಲಪ್ಪ ಬೆನ್ನಪ್ಪನ್ನವರ ಎಲ್ ಎಚ್ ಮಂಟೂರ ಸತ್ತಿಗೇರಿ ಹೆಚ್ ಎಸ್ ಹಂಗರಗಿ ಶಶಿಕಾಂತ ಬಾರಕೇರ ಡಿ ವೈ ಕೋಲ್ಕಾರ ಮಹಾಂತೇಶ ಅಂಬಿಗೇರ ಎಂಬಿ ಅಂಬಿಗೇರ ಹೆಚ್ ಸಿ ಅಂಬಿಗೇರ ಬಿ ಎಸ್ ಮದ್ಲಿ ಎಸ್ ಪಿ ಸಂಶಿ ರಮೇಶ ಪಡಸಲಗಿ ಪ್ರದೀಪ ಮಂಟೂರ, ರೇಣುಕಾ ಗುಳೇದಗುಡ್ಡ ರೇಣುಕಾ ಡಿಗ್ಗಿ ರಾಜು ಬಾಡದ ಚಂದ್ರು ಅಂಬಿಗೇರ ಸೇರಿದಂತೆ ಇನ್ನಿತರರು ಇದ್ದರು.