ಯಾದಗಿರಿ: ಪ್ರತಿಭೆಗೆ ತಕ್ಕ ಗೌರವ ಸಿಗಲಿದ್ದು, ವಿದ್ಯಾಥರ್ಿಗಳು ಸಮಯ ವ್ಯರ್ಥ ಮಾಡದೆ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುಂದೆ ಬರಬೇಕು ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ಕಿವಿಮಾತು ಹೇಳಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಂಗಳೂರು ಮೂಲದ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸಂಸ್ಥೆಯಿಂದ ಸಕರ್ಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕ ಪಡೆದವರಿಗೆ ನೀಡುವ ಪ್ರತಿಭಾ ವಿದ್ಯಾಥರ್ಿ ವೇತನ ಚೆಕ್ಗಳು ವಿದ್ಯಾಥರ್ಿಗಳಿಗೆ ವಿತರಿಸಿ ಮಾತನಾಡಿ, ನಾವು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ. ಜೀವನದಲ್ಲಿ ಉನ್ನತವಾದ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾಥರ್ಿ ವೇತನ ಪಡೆದವರು ಹೆಚ್ಚಿನ ಪರಿಶ್ರಮ ವಹಿಸಿ ವ್ಯಾಸಂಗ ಮಾಡಿ. ಉನ್ನತ ಹುದ್ದೆ ಪಡೆದುಕೊಳ್ಳಲು ಪ್ರಯತ್ನಿಸಬೇಕು. ಅಲ್ಲದೆ, ನೀವು ಇನ್ನಿತರರಿಗೆ ಮಾದರಿಯಾಗಬೇಕು. ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸಂಸ್ಥೆ ನೀಡುತ್ತಿರುವ ಈ ಸಹಾಯ ಶ್ಲಾಘನೀಯ ಎಂದರು.
ಯಡ್ರಾಮಿ ಪ್ರೌಢಶಾಲೆಯ ಭವ್ಯ, ದೇವತ್ಕಲ್ನ ಭಾಗ್ಯಶ್ರೀ, ಚಿಂಚೋಡಿಯ ರೇಣುಕಾಗೆ ಪ್ರತಿಭಾ ಪುರಸ್ಕಾರ ಪ್ರಮಾಣಪತ್ರಗಳನ್ನು ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ ವೇದಮೂತರ್ಿ, ಸಂಸ್ಥೆಯ ಮ್ಯಾನೇಜರ್ ಶಿವಲಿಂಗಯ್ಯ, ವಿಭಾಗೀಯ ಮ್ಯಾನೇಜರ್ ಗಿರೀಶ, ಏರಿಯಾ ಮ್ಯಾನೇಜರ್ ಪ್ರಕಾಶ, ನಾಗರಾಜ, ಅರವಿಂದ್ ಇದ್ದರು.