ಸುರಪುರ: ಮನುಷ್ಯನ ಜೀವನದಲ್ಲಿ ಆಸ್ತಿ ಮತ್ತು ಹಣಕ್ಕಿಂತ ಆರೋಗ್ಯವೇ ಬಹಳ ಮುಖ್ಯವಾಗಿದೆ ಎಂದು ಹಸನಾಪುರ ತಕ್ಷಶಿಲಾ ಅಂತಾರಾಷ್ಟಿçÃಯ ಶಾಲೆ ಅಧ್ಯಕ್ಷ ಅಂಬಿಕಾ ಯನಗುಂಟಿ ಹೇಳಿದರು.
ಇಲ್ಲಿ ಗರುಡಾದ್ರಿ ಕಲಾ ಮಂದಿರದಲ್ಲಿ ಬಣಗಾರ ಫೌಂಡೇಷನ್‌ನಿAದ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ಯೋಗ ದಿನ, ಯೋಗ ಸಾಧಕರಿಗೆ ಸನ್ಮಾನ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಯೋಗ ಮಾಡುವುದನ್ನು ನಿತ್ಯ ರೂಢಿಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಸಂಪತ್ತಿಗಿAತ ಮಿಗಿಲಾದದ್ದು ಇನ್ನೊಂದಿಲ್ಲ. ಜೀವನದಲ್ಲಿ ಆರೋಗ್ಯ ಇಲ್ಲದೆ ಹೋದರೆ ಏನನ್ನೂ ಸಾಧಿಸಲಾಗದು. ಹೀಗಾಗಿ ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳಬೇಕು. ಯೋಗ ಮಾಡುವುದಕ್ಕೆ ಯಾವುದೇ ಖರ್ಚುವೆಚ್ಚಗಳಿಲ್ಲ. ಅದಕ್ಕೆ ಸಮಯ ಮಾತ್ರ ನೀಡಬೇಕು. ನಮ್ಮ ಮನಸ್ಸು, ಬುದ್ದಿ ಹತೋಟಿಗೆ ತರುವುದೇ ಯೋಗ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಯೋಗ ಸಹಾಯ ಮಾಡುತ್ತದೆ ಎಂದು ಹೇಳಿದರು.
ಅರ್ಟ್ ಆಫ್ ಲಿವಿಂಗ್‌ನ ಶಿಲ್ಪಾ ಅವಂಟಿ ಮಾತನಾಡಿ, ಯೋಗ ಎಂದರೆ ದೇಹ, ಉಸಿರು, ಮನಸ್ಸನ್ನು ಒಂದುಗೂಡಿಸಿ ಮಾಡುವುದು. ಯೋಗ ನಮ್ಮ ದಿನನಿತ್ಯದ ಚಟುವಟಿಕೆಯಾಗಬೇಕು. ಮನಸ್ಸು ಒಂದು ಗಾಳಿಪಟ, ಉಸಿರು ಎನ್ನುವುದು ಸೂತ್ರ. ಮನಸ್ಸಿನ ಎಲ್ಲ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಉಸಿರಾಟ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಮನಸ್ಸನ್ನು ನಮ್ಮ ಉಸಿರಾಟದ ಮೂಲಕ ಹತೋಟಿಗೆ ತರಬೇಕು. ಜೀವನದ ಪ್ರತಿಕ್ಷಣ ಆರೋಗ್ಯವಾಗಿ, ಆನಂದವಾಗಿರಲು ಕಲಿತುಕೊಳ್ಳಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.
ಬಿಕೆ ರಾಗಿಣಿ ಅಕ್ಕ ಮಾತನಾಡಿ, ಯೋಗ ಸಂಸ್ಕೃತ ಶಬ್ದವಾಗಿದ್ದು ಜೋಡಣೆ ಎಂಬುದು ಅರ್ಥ. ಮನುಷ್ಯನ ಜೋಡಣೆ ಪರಮಾತ್ಮನ ಜತೆಗೆ, ನಮ್ಮ ಉಸಿರಿನ ಜತೆಗೆ, ಇಂದ್ರೀಯಗಳ ಜತೆಗೆ. ಜೀವನದಲ್ಲಿ ಯೋಗ ನಿರಂತರವಾಗಿರಬೇಕು. ಏಕತೆ, ಏಕಾಗ್ರತೆಯಿಂದ ನಮ್ಮ ಜೀವನ ಪವಿತ್ರವಾಗುತ್ತದೆ ಎಂದರು.
ಕಲಬುರಗಿ ಕಸಾಪ ಮಾಜಿ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಬಣಗಾರ ಫೌಂಡೇಷನ್ ಅನೇಕ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು. ಸಾಹಿತಿ ಪಾರ್ವತಿ ಬೂದೂರು, ಆನಂದ ಬಾರಿಗಿಡದ ಹುಣಸಗಿ, ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಜಯಲಲಿತಾ ಪಾಟೀಲ್ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯರು ಸಂದೇಶ ನೀಡಿದರು. ಪ್ರಾಚಾರ್ಯ ಸೈದಾಬಿ ಜಮಾದಾರ್, ಕಸಾಸಂ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಶ್ರೀನಿವಾಸ ಜಾಲವಾದಿ, ಸಾಯಬಣ್ಣ ಪುರ್ಲೆ, ಗಂಗಾಧರ ರುಮಾಲ್, ಬಸವರಾಜ ಪಾಟೀಲ್, ಚಂದ್ರಕಾAತ ಮಾರ್ಗೆಲ್, ನಿಂಗಪ್ಪ ನಾಯಕ. ಬಣಗಾರ ಫೌಂಡೇಷನ್ ಅಧ್ಯಕ್ಷ ವಸಂತಕುಮಾರ ಬಣಗಾರ ವೇದಿಕೆಯಲ್ಲಿದ್ದರು.
ಬಾಲಪತ್ರಿಭೆ ಸಾನ್ವಿ ಜೋಗುಂಡಬಾವಿ ಭರತನಾಟ್ಯ ಮತ್ತು ಸಿದ್ದು ನಂಬಾ ಯೋಗ ಪ್ರದರ್ಶನ ನೀಡಿದರು. ಯೋಗ ಸಾಧಕರಾದ ವೈ.ಪ್ರಭಂಜನ್ ಜಹಗೀರದಾರ್, ಲಕ್ಷ್ಮೀಕಾಂತ ಶಿರವಾಳ ರಂಗAಪೇಟೆ, ಈಶ್ವರಯ್ಯ ರುಮಾಲಮಠ ಲಕ್ಷ್ಮೀಪುರ, ಹಣಮಂತ ಪೂಜಾರಿ ತಿಮ್ಮಾಪುರ, ಅನಿತಾ ಪಿ.ಶಹಾಪುರಕರ್, ಸಿದ್ದಮ್ಮ ಎಂ.ಶೆಟಿಗೇರಾ, ಸಿದ್ದು ಬಿ.ನಂಬಾ ಹಸನಾಪುರ ಅವರಿಗೆ ಸನ್ಮಾನಿಸಲಾಯಿತು. ಶರಣಮ್ಮ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಎಚ್.ರಾಠೋಡ್ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿ ವಂದಿಸಿದರು.