ಮದ್ದೂರು ತಾಲೂಕಿನ ತೂಬಿನಕೆರೆ ಗ್ರಾಮದ ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಸಿ.ಅಪೂರ್ವಚಂದ್ರ ಉದ್ಘಾಟಿಸಿದರು. ಅಶೋಕ್, ಡಾ.ರವಿ, ಯು.ಎಸ್.ಶಿವಕುಮಾರ್, ಜಿ.ಎಸ್.ಶಂಕರೇಗೌಡ, ಎಚ್.ಎಸ್.ಪಂಚಲಿಂಗೇಗೌಡ, ಎನ್.ರೇವಣ್ಣ, ಜಯವರ್ಧನ್ ಇದ್ದರು.  
ಜಿಲ್ಲೆ

ಜೀವನದ ಮೌಲ್ಯ ತಿಳಿಸಲಿರುವ ಎನ್ನೆಸ್ಸೆಸ್ಸ್

ಮದ್ದೂರು: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹಾಗೂ ಜೀವನದ ಮೌಲ್ಯ ಕಲಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಹೇಳಿದರು.

ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿಯವರ ಪರಿಕಲ್ಪನೆಯಲ್ಲಿ ಪ್ರಾರಂಭವಾದ ಎನ್ನೆಸ್ಸೆಸ್ಸ್ ಶಿಬಿರ ವಿದ್ಯಾರ್ಥಿಗಳಲ್ಲಿ ಸಮರ್ಪಣ ಭಾವ ಬೆಳೆಸುವುದರ ಜತೆಗೆ ಭಾವೈಕೈತೆ, ಸೌಹಾರ್ದತೆ, ಸಹಕಾರ, ಸಂಯಮ, ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಮೌಲ್ಯಗಳನ್ನು ತಿಳಿಸುತ್ತದೆ ಎಂದರು.

ಕೆಸ್ತೂರು ಗ್ರಾಮ ಪಂಚಾಯಿತಿ ಸದಸ್ಯ ಟಿ.ಎನ್.ಅಶೋಕ್ ಮಾತನಾಡಿದರು. ಎನ್ನೆಸ್ಸೆಸ್ಸ್‌ನ ಮೈಸೂರು ವಿಭಾಗದ ಸಹಾಯಕ ಸಂಯೋಜನಾಧಿಕಾರಿ ಡಾ.ರವಿ, ಪ್ರಾಂಶುಪಾಲರಾದ ಯು.ಎಸ್.ಶಿವಕುಮಾರ್, ಜಿ.ಎಸ್.ಶಂಕರೇಗೌಡ, ಶಿಬಿರಾಧಿಕಾರಿ ಎಚ್.ಎಸ್.ಪಂಚಲಿಂಗೇಗೌಡ, ಸಹ ಶಿಬಿರಾಧಿಗಳಾದ ಎನ್.ರೇವಣ್ಣ, ಸಿ.ಜಯವರ್ಧನ್, ಮೋಹನ್‌ಕುಮಾರ್, ಗ್ರಾಮದ ಮುಖಂಡರಾದ ರಾಮೇಗೌಡ, ಗೋವಿಂದ, ರಾಜಣ್ಣ, ಬೋರಲಿಂಗಯ್ಯ, ಸಂಜೀವಯ್ಯ, ರಾಜು, ರಮೇಶ, ಶಿವಲಿಂಗಯ್ಯ, ತಿರುಮಲ್ಲಯ್ಯ, ಕಾಳಯ್ಯ ಇದ್ದರು.