ಜಿಲ್ಲೆ

ಜೀವನದ ಪ್ರತಿದಿನ ಶ್ರಾವಣ ಮಾಸವಾಗಲಿ

ಕೊಡೇಕಲ್ : ಶ್ರಾವಣ ಮಾಸದ ತಿಂಗಳ ಪೂರ್ಣ ವ್ರತ ಆಚರಣೆಯಂತೆ ನಿತ್ಯ ನಮ್ಮ ಜೀವನ ಕೂಡ ಶ್ರಾವಣ ಮಾಸವಾದಾಗ ನಮ್ಮ ಬದುಕು ಸುಂದರವಾಗಲು ಸಾಧ್ಯ ಎಂದು ಶ್ರೀಗುರು ದುರದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ನುಡಿದರು.

ಶ್ರಾವಣ ಮಾಸ ಸಮಾರೋಪ ಹಿನ್ನೆಲೆಯಲ್ಲಿ ಈಶ್ವರ ದೇವರಿಗೆ ಗುರುವಾರ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಶ್ರಾವಣ ಮಾಸದಲ್ಲಿ ಎಲ್ಲ ದುಶ್ಚಟ ತ್ಯಜಿಸಿ ವ್ರತ ಆಚರಣೆ ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ. ಭಗವಂತ ನೀಡಿದ ದೇಹವನ್ನು ಜೋಪಾನವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಈಶ್ವರ ದೇವರ ಉತ್ಸವ ಮೂರ್ತಿ ಮತ್ತು ಕಳಸಗಳನ್ನು ಗಂಗಾಸ್ನಾನಕ್ಕಾಗಿ ಜಕಣಿ ಬಾವಿಗೆ ಆಗಮಿಸಿ ಗಂಗಾ-ಭಾಗೀರಥಿ ಪೂಜೆ ಸಲ್ಲಿಸಲಾಯಿತು. ವಿರಕ್ತಮಠದ ಶ್ರೀ ಸಿದ್ಧಲಿಂಗಸ್ವಾಮಿ, ಶಾಮಸುಂದರ ಜೋಶಿ, ಡಾ.ಬಿ.ಬಿ.ಬಿರಾದಾರ, ಅಯ್ಯಪ್ಪ ಪಡಶೆಟ್ಟಿ, ಮೋಹನ ಪಾಟೀಲ್, ಬಸವರಾಜ ಅಂಗಡಿ, ಮಲ್ಲಣ್ಣ ಆರಲಗಡ್ಡಿ, ಮಲ್ಲಿಕಾರ್ಜುನ ಜಂಗಳಿ, ವಿರೇಶ ಜೈನಾಪುರ, ವಿಶಾಲ ಅಂಗಡಿ, ವಿಜಯಕುಮಾರ ಮದರಿ, ಗುಂಡಣ್ಣ ನಗನೂರ, ಬಸಣ್ಣ ಬಂಗಾರಗುAಡ ಇತರರಿದ್ದರು.