ಬೆಳಗಾವಿ: ಜೀವನದಲ್ಲಿ ದೊಡ್ಡ ಬಹುಮಾನವೆಂದರೆ ಸಂತೋಷ. ಆದ್ದರಿಂದ ಸಾಧನೆಯಲ್ಲಿ ಸಂತೋಷ ಕಾಣಬೇಕು ಎಂದು ಡಿಸಿಪಿ ರೋಹನ್ ಜಗದೀಶ ಹೇಳಿದರು.
ನಗರದ ಕೆಎಲ್ಎಸ್ನ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾಲೇಜಿನ ಕ್ರೀಡಾಕೂಟ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕೆ ಜತೆಗೆ ಕ್ರೀಡಾಕೂಟಗಳಲ್ಲಿ, ಸಾಂಸತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ಆರ್ಎಲ್ ಕಾನೂನು ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಆರ್.ಎಸ್.ಮುತಾಲಿಕ ಮಾತನಾಡಿ, ಏಕಾಗ್ರತೆಯಿಂದ ಕೂಡಿದ ಗಹನ ಅಧ್ಯಯನದಿಂದ ಜೀವನದಲ್ಲಿ ಸಾಧನೆ ಮಾಡಬಹುದು ಎಂದರು.
2023-24 ನೇ ಶೈಣಿಕ ವರ್ಷದ ಎಂ.ಕೆ.ನಂಬಿಯಾರ ಚಿನ್ನದ ಪದಕವನ್ನು ಭರತ ಗೋಪಾಲ್ ನಾಯಕ, ದಿ. ಶಂಕರ ರಾವ್ ವೆಂಗುರ್ಲೇಕರ ಬೆಳ್ಳಿ ಪದಕ ಬಹುಮಾನವನ್ನು ಮೌನೇಶ ಬಡಿಗೇರ ಗಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ಬಹುಮಾನ ವಿತರಿಸಲಾಯಿತು.
ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ, ಜಿಮಖಾನಾ ಯೂನಿಯನ್ ಅಧ್ಯ ಡಾ.ಡಿ.ಪ್ರಸನ್ನಕುಮಾರ, ದೈಹಿಕ ನಿರ್ದೇಶಕ ಅಮಿತ್ ಜಾಧವ, ಪ್ರಧಾನ ಕಾರ್ಯದರ್ಶಿ ಪೂಜಾ ಸಂಭಾಜಿಚೆ ಇತರರಿದ್ದರು.